Cnewstv / 02.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್. ಪ್ರಯಾಣಿಕರಿಗೆ ಕರೆಂಟ್ ಶಾಕ್..
ಶಿವಮೊಗ್ಗ : ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಾಗರ ತಾಲೂಕಿನ ಗೆಣಿಸಿನಕುಣಿಯಲ್ಲಿ ನಡೆದಿದೆ.
ಸಿಗಂದೂರಿನಿಂದ ಸಾಗರದ ಕಡೆಗೆ ಬರುತ್ತಿದ್ದ ಬಸ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮವಾಗಿ ವಿದ್ಯುತ್ ತಂತಿಗಳು ಬಸ್ಸಿನ ಮೇಲೆ ಬಿದ್ದಿದ್ದು ಪ್ರಯಾಣಿಕರಿಗೆ ಶಾಕ್ ಹೊಡೆದ ಅನುಭವವಾಗಿದೆ. ಬಸ್ಸಿನಲ್ಲಿ ಸುಮಾರು 45ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು ಅದರಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.
ಘಟನೆಯಿಂದಾಗಿ ಇಬ್ಬರೂ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು ಅವರನ್ನ ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv