Breaking News

JCB ಬಳಸಿ ATM ಲೂಟಿಗೆ ಯತ್ನಿಸಿದ ಖತರ್ನಾಕ್ ಕಳ್ಳರು..!!

Cnewstv / 26.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

JCB ಬಳಸಿ ATM ಲೂಟಿಗೆ ಯತ್ನಿಸಿದ ಖತರ್ನಾಕ್ ಕಳ್ಳರು..!!

ಶಿವಮೊಗ್ಗ : ಜೆಸಿಬಿ ಬಳಸಿ ಎಟಿಎಂ ಲೂಟಿಗೆ ಯತ್ನಿಸಿದ ಘಟನೆ ತಡರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಾಲಯದ ಮುಂಭಾಗದಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂ ಅನ್ನು ಕಳ್ಳತನ ಮಾಡಲು ಜೆಸಿಬಿಯನ್ನು ಬಳಸಿದ್ದಾರೆ. ಇದಕ್ಕಾಗಿ ಜೆಸಿಬಿಯನ್ನು ಕೂಡ ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದ ಜೆಸಿಬಿ ಇಂದಲೇ ಎಟಿಎಂ ಲೂಟಿಗೆ ಮುಂದಾಗಿದ್ದಾರೆ. ಅದರೆ ವಿನೋಬನಗರದ ಬೀಟ್ ಪೊಲೀಸರನ್ನು ನೋಡುತ್ತಲೇ ಜೆಸಿಬಿಯನ್ನು ಕೂಡ ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.‌

ಎಟಿಎಂ ಮಿಷಿನ್ ಸಂಪೂರ್ಣವಾಗಿ ಜಖಂ ಆಗಿದೆ. ಜೆಸಿಬಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*