Cnewstv / 25.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಎ.ಜಿ.ಪಿ. ಸಿಟಿ ಗ್ಯಾಸ್ ಪ್ಲಾಂಟ್ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆರವುಗೊಳಿಸಿ..
ಶಿವಮೊಗ್ಗ : ಶಿವಮೊಗ್ಗ ನಗರದ ಹಳೇ ಮಂಡ್ಲಿಯ ಹತ್ತಿರ ಪ್ರಾರಂಭವಾಗುತ್ತಿರುವ ಎ.ಜಿ.ಪಿ. ಸಿಟಿ ಗ್ಯಾಸ್ ಬಂಕ್ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆರವುಗೊಳಿಸಿ ಎಂದು ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ವಾರ್ಡ್ ನಂ.31, 33 ರ ಶಿವಮೊಗ್ಗ ನಗರದ ಹಳೇ ಮಂಡ್ಲಿಯ ಹತ್ತಿರ ಗಜಾನನ ಗ್ಯಾರೇಜ್ ಹಿಂಭಾಗ ಶಾರದ ನಗರ ರಸ್ತೆ ಇಲ್ಲಿ ಸುತ್ತಮುತ್ತಲಿನಲ್ಲಿ ಮನೆಗಳಿದ್ದು, ಮತ್ತು ಇಲ್ಲಿನ ಪ್ರದೇಶಗಳಾದ ಹಳೇಮಂಡ್ಲಿ, ಶಾರದ ನಗರ, ನ್ಯೂಮಂಡಿ, ಹರಕೆರೆ, ಇಲಿಯಾಜ್ ನಗರ, ಗಂಧರ್ವ ನಗರ, ನಮೋ ಶಂಕರ ನಗರ, ಸವಾಯಿಪಾಳ್ಯ ಮತ್ತು ಕುರುಬರಪಾಳ್ಯ ಪ್ರದೇಶಗಳಿದ್ದು, ಈ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿಗಳು ಹಾಗೂ ಆಸ್ಪತ್ರೆಗಳು ಸಹ ಇದ್ದು, ಸುಮಾರು 3 ರಿಂದ 4 ಸಾವಿರ ಮನೆಗಳಿದ್ದು, ಇದರ ಪಕ್ಕದಲ್ಲಿ ಎ.ಜಿ.ಪಿ. ಸಿಟಿ ಗ್ಯಾಸ್ ಪ್ಲಾಂಟ್ ನಿರ್ಮಾಣ ಮಾಡುತ್ತಿದ್ದಾರೆ.
ಇದರಿಂದ ಇಲ್ಲಿನ ನಿವಾಸಿಗಳಿಗೆ ಗ್ಯಾಸ್‌ನಿಂದ ಬರುವ ವಾಸನೆಯಿಂದ ಉಸಿರಾಟದ ತೊಂದರೆಯಾಗಿ ಅನಾರೋಗ್ಯ ಉಂಟಾಗುವ ಸಂಭವವಿದ್ದು ಮತ್ತು ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಆಸ್ಪತ್ರೆಗಳಿದ್ದು, ರೋಗಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೆ ಶಾಲೆ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ. ಮತ್ತು ಇಲ್ಲಿ ವಾಸವಾಗಿರುವ ವಯಸ್ಸಾದ ವೃದ್ಧರಿಗೆ ಆರೋಗ್ಯದ
ಸಮಸ್ಯೆ ಉಲ್ಬಣವಾಗುತ್ತದೆ.
ಹೀಗಾಗಿ ಎ.ಜಿ.ಪಿ. ಸಿಟಿ ಗ್ಯಾಸ್ ಪ್ಲಾಂಟ್‌ನ್ನು ಬೇರೆ ಕಡೆಗೆ
ಸ್ಥಳಾಂತರಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದಿನೇಶ್ ಎಸ್.ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕೇತ್ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಭಾಗಿಯಾಗಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv