Breaking News

ಲೋಕಾಯುಕ್ತ ಬಲೆಗೆ ಬಿದ್ದ ತಾಲೂಕು ಕಚೇರಿ, ಶಿರಸ್ತೇದಾರ್

Cnewstv / 24.07.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಲೋಕಾಯುಕ್ತ ಬಲೆಗೆ ಬಿದ್ದ ತಾಲೂಕು ಕಚೇರಿ, ಶಿರಸ್ತೇದಾರ್

ಶಿವಮೊಗ್ಗ : ಇಂದು ಶಿವಮೊಗ್ಗ ತಾಲೂಕು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಿವಮೊಗ್ಗ ತಾಲೂಕು ಕಚೇರಿಯ ಹಕ್ಕು ದಾಖಲೆ ಶಾಖೆಯ ಶಿರಸ್ತೇದಾರ್ ಅರುಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮನೆಯ ಖಾತೆ ಬದಲಾವಣೆಗೆ 3 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ 1.5 ಲಕ್ಷ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಹನುಮಂತ ಆರ್ ಎನ್ನುವವರು ನೀಡಿದ ದೂರಿನ ಮೇಲೆಗೆ ಲೋಕಾಯುಕ್ತರು ದಾಳಿಯನ್ನು ನಡೆಸಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದಿರುವ ಅರುಣ್ ಜಿಲ್ಲಾ ಕಂದಾಯ ನೌಕರರ ಸಂಘದ ಅಧ್ಯಕ್ಷರು ಕೂಡ ಆಗಿದ್ದಾರೆ.

ಲೋಕಾಯುಕ್ತ ಚಿತ್ರದುರ್ಗ ಎಸ್ ಪಿ ವಾಸುದೇವ್ ಶಿವಮೊಗ್ಗ ಡಿ ವೈ ಎಸ್ ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಜಾಹಿರಾತು.

https://youtu.be/z7mZ_qX2l2Y

 

Leave a Reply

Your email address will not be published. Required fields are marked *

*