Breaking News

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸುಧಾ ಮೂರ್ತಿ ಚಾಲನೆ.

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇಂದು ಬೆಳ್ಳಗೆ ಸುಧಾ ಮೂರ್ತಿ ಚಾನನೆ ನೀಡಿದ್ದರು. ಚಾಮುಂಡಿ ಬೆಟ್ಟದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿಯವರು ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸುಧಾ ಮೂರ್ತಿ ಭಾಷಣ ಆರಂಭದಲ್ಲಿ, ಕನ್ನಡ ಜನತೆಗೆ ನನ್ನ ನಮಸ್ಕಾರಗಳನ್ನು ತಿಳಿಸಿದ್ದರು. ಸುಧಾ ಮೂರ್ತಿಯವರು ಸಂಸ್ಕೃತಿಯ ಪ್ರತಿಬಿಂಬವಾದ ದಸರಾ ಮಹೋತ್ಸವ ಉದ್ಘಾಟನೆಗೆ ನನ್ನ ಆಯ್ಕೆ ಮಾಡಿದ್ದು ಪೂರ್ವ ಜನ್ಮದ ಪುಣ್ಯ. ದಸರಾ ಶತಮಾನಗಳಿಂದ ಆಚರಿಸುತ್ತಿರುವ ಹಬ್ಬ.ಅಜ್ಜಿಯ ಕಾಲದಲ್ಲಿ ಇದಕ್ಕೆ ಮಹಾನವಮಿ ಹಬ್ಬ ಎಂದು ಕರೆಯುತ್ತಿದ್ದರು. ಮೈಸೂರಿನ ದೊರೆಗಳಿಗೆ ನಾವು ಕೃತಜ್ಞರಾಗಿರಬೇಕು. ನಾಡಿನ ಅಭಿವೃದ್ಧಿಗೆ ಮೈಸೂರು ದೊರೆಗಳ ಕೊಡುಗೆ ಅಪಾರ ಎಂದರು.
ಪಂಪ ಹೇಳುವ ಹಾಗೆ ಕನ್ನಡವೆಂದರೆ ನನಗಿಷ್ಟ. ಮತ್ತೆ ಮತ್ತೆ ಕನ್ನಡ ನಾಡಿನಲ್ಲಿಯೇ ಹುಟ್ಟಬೇಕು ಎಂಬ ಹಂಬಲವಿದೆ. ಕನ್ನಡ ಅತ್ಯಂತ ಸುಂದರ ಸುಲಲಿತ ಭಾಷೆ. ‘ಕಳಿತ ಬಾಳೆಯ ಹಣ್ಣಿನಂದದಿ’ ಎಂದು ಕವಿ ಡಿವಿಜಿ ಅವರ ಕಗ್ಗ ಸ್ಮರಿಸಿ ಕನ್ನಡ ಸಚಿವರು, ಕನ್ನಡದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದರು.ದಸರಾ ಇಂದಿನ ಹಬ್ಬವಲ್ಲ. ಶತಮಾನಗಳಿಂದ ಆಚರಿಸಿಕೊಂಡು ಬಂದ ಹಬ್ಬ. ವಿಜಯನಗರ ಅರಸರ ಕಾಲದಲ್ಲಿ ಇದು ಆಚರಣೆಗೆ ಬಂತು. ‘ಆಡದೇ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ಅಧಮ ತಾನಾಡಿಯು ಮಾಡದವ’ ಎಂದು ಸರ್ವಜ್ಞನ ವಚನವನ್ನು ಸುಧಾ ಮೂರ್ತಿ ಯವರು ನೆನೆದರು.

Leave a Reply

Your email address will not be published. Required fields are marked *

*