Breaking News

ಜು.21 ರಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ.

Cnewstv / 19.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಜು.21 ರಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ.

ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭವನ್ನು ಜು.21 ರ ಸಂಜೆ 4 ಗಂಟೆಗೆ ವಿಶ್ವವಿದ್ಯಾಲಯ ಮುಖ್ಯ ಆವರಣ, ಇರುವಕ್ಕಿ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ತಿಳಿಸಿದರು.

ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಇವರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ಸುಗ್ಗಿ ಸಂಭ್ರಮ ಜರುಗಲಿದ್ದು, ಪದವೀಧರರಿಗೆ ಪದವಿ ಪ್ರಧಾನ ಮಾಡುವರು. ಕೃಷಿ ಸಚಿವರು ಹಾಗೂ ವಿವಿ ಸಹ-ಕುಲಾದಿಪತಿಗಳಾದ ಎನ್.ಚಲುವರಾಯಸ್ವಾಮಿ ಗೌರವ ಉಪಸ್ಥಿತಿ ಇರಲಿದೆ. ಪದ್ಮವಿಭೂಷಣ ಪ್ರಶಸ್ತಿ ವಿಜೇತರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರು 8ನೇ ಘಟಿಕೋತ್ಸವ ಭಾಷಣ ಮಾಡುವರು ಎಂದು ಇಂದು ನವುಲೆಯ ಕೃಷಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

37 ಚಿನ್ನದ ಪದಕ ಪ್ರದಾನ :
8ನೇ ಘಟಿಕೋತ್ಸವದಲ್ಲಿ 409 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ, 101 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 23 ವಿದ್ಯಾರ್ಥಿಗಳು ಪಿ.ಹೆಚ್‍ಡಿ, ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ 08 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಇವರಿಗೆ ಒಟ್ಟು 15 ಚಿನ್ನದ ಪದಕಗಳನ್ನು ನೀಡಲಾಗುವುದು. 14 ಎಂ.ಎಸ್ಸಿ ವಿದ್ಯಾರ್ಥಿಗಳು, 07 ಪಿಹೆಚ್‍ಡಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಒಟ್ಟು 37 ಚಿನ್ನದ ಪದಗಳನ್ನು ನೀಡಲಾಗುವುದು.

ವಿಶ್ವವಿದ್ಯಾಲಯ ಈ ವರ್ಷ ಹಲವಾರು ವಿಶಿಷ್ಟ ಸಾಧನೆಗಳಿಗೆ ಸಾಕ್ಷಿಯಾಗಿದ್ದು, ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಯೋಜನೆಯಡಿ ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲೇ ಮೊದಲ ಬಾರಿಗೆ ಐ.ಓ.ಟಿ ಸ್ಮಾರ್ಟ್ ಕೃಷಿ, ತೋಟಗಾರಿಕೆ, ಅರಣ್ಯ ವಿಷಯಗಳನ್ನು ಪ್ರಾಯೋಗಿಕ ಕಲಿಕೆ ಪ್ರಾರಂಭಿಸಿದ್ದು 20 ವಿದ್ಯಾರ್ಥಿಗಳ ಮೊದಲ ತಂಡ ಇದನ್ನು ಪೂರ್ಣಗೊಳಿಸಿದೆ. ಕೃಷಿಯಲ್ಲಿ ಗಣಕ, ಡ್ರೋನ್ ಹಾಗೂ ರೋಬೋಟ್ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ ಮೊದಲ ಬಾರಿಗೆ ಪೆÇ್ರೀಗ್ರಾಮಿಂಗ್ ಫಾರ್ ಕೃಷಿ, ತೋಟಗಾರಿಕೆ, ಅರಣ್ಯ ಎಂಬ ವಿಷಯವನ್ನು ಅಳವಡಿಸಲಾಗಿದೆ.

ಪದವಿ ಹಂತದಲ್ಲಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ, ತರಬೇತಿಗೊಳಿಸುವ ವಿಶಿಷ್ಟವಾದ, ಅಂತರರಾಷ್ಟ್ರೀಯ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇದರಡಿ ನಾಲ್ಕು ವಿದ್ಯಾರ್ಥಿನಿಯರು ಅಮೆರಿಕಾದ ಕನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಹೋಗಿ ಬಂದಿದ್ದಾರೆ. ಆರು ವಿದ್ಯಾರ್ಥಿಗಳು ಜರ್ಮನಿಯ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಹೋಗಿ ಬಂದಿರುವುದು ವಿಶೇಷ ಎಂದರು.

ಈ ಸಾಲಿನಲ್ಲಿ ಜೈವಿಕ ಶಿಲೀಂದ್ರ ನಾಶಕಗಳ ಉತ್ಪಾದನೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ 15 ಟನ್ ಉತ್ಪಾದಿಸಿ, ಮಾರಾಟ ಮಾಡಿ ರೂ. 6.5 ಲಕ್ಷ ನಿವ್ವಳ ಲಾಭಗಳಿಸಿದ್ದಾರೆ. ಪ್ರತಿ ವಿದ್ಯಾರ್ಥಿಯು ರೂ. 20 ಸಾವಿರ ಆದಾಯ ಗಳಿಸಿರುವುದು ಹೆಮ್ಮೆಯ ವಿಚಾರ.

2023 ರ ಜನವರಿ 06 ರಿಂದ 18 ರಂದು ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರಿನಲ್ಲಿ ಆಯೋಜಿಸಲಾಗಿದ್ದ 8ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಯುವ ಲಹರಿಯಲ್ಲಿ ಕೃಷಿ ಮಹಾವಿದ್ಯಾಲಯ, ಇರುವಕ್ಕಿಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದ 4ನೇ ಅಂತರ ವಿಶ್ವವಿದ್ಯಾಲಯದ ಆಗ್ನೇಯವಲಯ ಯುವಜನೋತ್ಸವದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ, ಬಹುಮಾನ ಪಡೆದಿರುತ್ತಾರೆ. 2020-21 ನೇ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್)ಯಡಿ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*