Cnewstv / 18.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.
ಶಿವಮೊಗ್ಗ : ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಹರು ಶಿವಮೊಗ್ಗ ಮತ್ತು ಭದ್ರಾವತಿ ಅನೌಪಚಾರಿಕ ಪಡಿತರ ಪ್ರದೇಶ/ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಶಿವಮೊಗ್ಗ ನಗರ ಪ್ರದೇಶ ವ್ಯಾಪ್ತಿಯ ಆರ್.ಎಂ.ಎಲ್. ನಗರದ ಎಡಭಾಗ, ಕನಕ ವಿದ್ಯಾ ಸಂಸ್ಥೆಯ ಹತ್ತಿರ, ಮಂಜುನಾಥ ಬಡಾವಣೆ, ನಾಗರಕಟ್ಟೆ ದೇವಸ್ಥಾನದ ಹತ್ತಿರ, ಶಾಂತಿನಗರ ಮುಖ್ಯರಸ್ತೆ, ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಹತ್ತಿರ, ಗಾಡಿಕೊಪ್ಪ ಪುರದಾಳು ರಸ್ತೆ, ಗಾಡಿಕೊಪ್ಪ ತಾಂಡ, ಟಿಪ್ಪುನಗರ ಬಲಭಾಗ ಅಲ್ ಹಬೀಬ್ ಆಂಗ್ಲ ಪ್ರಾ.ಮತ್ತು ಪ್ರೌಢಶಾಲೆ ಹತ್ತಿರ, ಟಿಪ್ಪುನಗರ ಕೆಕೆ ಶೆಡ್, ಗೋಪಾಳ ರಂಗನಾಥ ಬಡಾವಣೆ ಬಿ ಬ್ಲಾಕ್ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ, ಶರಾವತಿ ನಗರ ಮುಖ್ಯರಸ್ತೆ ಬಿ ಬ್ಲಾಕ್ ಹಿಂದೂ ರುದ್ರಭೂಮಿ ಎದುರು.
ಭದ್ರಾವತಿನಗರ ಪ್ರದೇಶದ ಹುತ್ತಾ ಕಾಲೋನಿ ಈ ಎಲ್ಲಾ ಸ್ಥಳಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗಸ್ಟ್-15 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv