Breaking News

ಸ್ಮಾರ್ಟ್ ಶಿವಮೊಗ್ಗ” : ನಗರದಲ್ಲಿ ಯಾವುದೇ ಸಮಸ್ಯೆ, ಸಲಹೆ ಇದ್ದರು ವಾಟ್ಸಪ್ ಮೂಲಕ‌ ಶಾಸಕರ ಕಚೇರಿಗೆ ನೇರವಾಗಿ ತಿಳಿಸಿ,

Cnewstv / 15.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

“ಸ್ಮಾರ್ಟ್ ಶಿವಮೊಗ್ಗ” : ನಗರದಲ್ಲಿ ಯಾವುದೇ ಸಮಸ್ಯೆ, ಸಲಹೆ ಇದ್ದರು ವಾಟ್ಸಪ್ ಮೂಲಕ‌ ಶಾಸಕರ ಕಚೇರಿಗೆ ನೇರವಾಗಿ ತಿಳಿಸಿ,

ಶಿವಮೊಗ್ಗ ‌: ಶಿವಮೊಗ್ಗ ನಗರದ ಜನರು ಇನ್ನೂ ಮುಂದೆ ಯಾವುದೇ ಸಮಸ್ಯೆ, ಸಲಹೆ ಇದ್ದರು ವಾಟ್ಸಪ್ ಮೂಲಕ‌ ಶಾಸಕರ ಕಚೇರಿಗೆ ನೇರವಾಗಿ ತಿಳಿಸಿ, ಪರಿಹಾರ ಪಡೆಯುವ ನೂತನ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ.

ಮೆಸೇಜ್ ಮಾಡುವುದು ಹೇಗೆ ??

 

* ಮೇಲೆ ಕಾಣಿಸುತ್ತೀರುವ QR Code ಸ್ಕ್ಯಾನ್ ಮಾಡಿದರೆ ವಾಟ್ಸಾಪ್ ಚಾಟ್ ಓಪನ್ ಆಗುತ್ತದೆ. ನಂತರ ತಮ್ಮ ಬಡಾವಣೆಯ ಸಲಹೆ ಹಾಗೂ ಸಮಸ್ಯೆಗಳನ್ನ ಮೆಸೇಜ್ ಮಾಡುವ ಮೂಲಕ ಕಳುಹಿಸಬಹುದು.

* +91- 9019901177 ಈ ವಾಟ್ಸಪ್ ನಂಬರ್ ಗೆ ತಮ್ಮ ಬಡಾವಣೆಯ ಸಮಸ್ಯೆ, ಸಲಹೆಗಳ ಬಗ್ಗೆ ಮೆಸೇಜ್ ಮಾಡಬಹುದು. ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಸೂಕ್ತ ಪರಿಹಾರ ದೊರೆಯಲಿದೆ

ಮುಂದಿನ ದಿನಗಳಲ್ಲಿ ಪ್ರತಿ ವಾರ್ಡಿನಲ್ಲಿ ಸಲಹಾಪಟ್ಟಿಗೆ ಇಟ್ಟು ಅಲ್ಲಿಯೂ ಕೂಡ ಸಾರ್ವಜನಿಕರು ಮುಕ್ತವಾಗಿ ಮುಂದಿನ ಐದು ವರ್ಷ ಶಿವಮೊಗ್ಗ ನಗರ ಹೇಗೆ ಕಾಣಬೇಕು ಎಂಬ ತಮ್ಮ ಸಲಹೆ ಅಭಿಪ್ರಾಯಗಳನ್ನು ತಿಳಿಸಬಹುದು.

ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 11 ರಂದು ನಡೆದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಭಾಷಣದಲ್ಲಿ ಹೇಳಿರುವಂತೆ “ತಂತ್ರಜ್ಞಾನವು ದೇಶದ ಅಭಿವೃದ್ಧಿ ಹೆಚ್ಚಿಸಲು ಇರುವ ಒಂದು ಪ್ರಮುಖ ಉಪಕರಣ”. ಇದೇ ಕಲ್ಪನೆಯೊಂದಿಗೆ ಸಿದ್ಧವಾಗಿರುವುದು ‘ಸ್ಮಾರ್ಟ್ ಶಿವಮೊಗ್ಗ’. ಇದರ ಭಾಗವಾಗಿ ವಾಟ್ಸಾಪ್ ಹೆಲ್ಡ್ ಲೈನ್ ನಂಬರ್ ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ನಗರದ ನಾಗರೀಕರ ಸಹಭಾಗಿತ್ವದಲ್ಲಿ ಅವರ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹ ಮಾಡುವ ಮೂಲಕ ಮುಂದಿನ ಐದು ವರ್ಷಗಳ ಕಾಲ ಶಿವಮೊಗ್ಗ ನಗರವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ವ್ಯವಸ್ಥೆ ರೂಪಿಸಲಾಗುವುದು.

ನಾಗರಿಕರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಶಾಸಕರ ಕಚೇರಿಗೆ ಈ ಸಹಾಯವಾಣಿಗೆ ವಾಟ್ಸಪ್ ಮೆಸೇಜ್ ಮಾಡುವ ಮುಖಾಂತರ ತಲುಪಿಸಬಹುದಾಗಿದೆ. ಅಷ್ಟೇ ಅಲ್ಲದೆ ನಾಗರಿಕರು ಅವರ ಸಮಸ್ಯೆಗಳನ್ನು ಸಹ ಮೆಸೇಜ್ ಮುಖಾಂತರ ಕರ್ತವ್ಯ ಭವನಕ್ಕೆ ತಲುಪಿಸಿದರೆ ಅದನ್ನು ಪಾಲಿಕೆ
ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಕರ್ತರ ಮುಖಾಂತರ ಸೀಮಿತ ಅವಧಿಯೊಳಗೆ ಸಮಸ್ಯೆಯನ್ನು
ಬಗೆಹರಿಸಲು ವ್ಯವಸ್ಥೆ ರೂಪಿಸಲಾಗಿದೆ. ಇದು ಜನರ ಹಾಗೂ ಜನಪ್ರತಿನಿಧಿಯ ನಡುವೆ ಸಂಪರ್ಕ ಸಾಧನೆಗೆ ಅನುವಾಗುವ ಒಂದು ಪ್ರಮುಖ ಪರಿಕರವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ‘ಕರ್ತವ್ಯಪಡೆ’ಯನ್ನು ಸಜ್ಜುಗೊಳಿಸಲಾಗಿದೆ.

ಎಸ್ ಎನ್ ಚನ್ನಬಸಪ್ಪ. ಶಾಸಕರು, ಶಿವಮೊಗ್ಗ ನಗರ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*