Cnewstv / 10.07.2023 / ದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಮರನಾಥ ಯಾತ್ರೆ ಸ್ಥಗಿತ.. ಸಾವಿರಾರು ಮಂದಿ ಅತಂತ್ರ..
ಉತ್ತರ ಭಾಗದಲ್ಲೂ ವರುಣ ಅಬ್ಬರಿಸತೊಡಗಿದ್ದು, ಜನಜೀವನ ಹಸ್ತವ್ಯಸ್ತವಾಗಿದೆ. ಅಮರನಾಥ ಯಾತ್ರೆ ಸ್ಥಗಿತಗೊಳಿಸಲಾಗಿದೆ.
ನಿರಂತರ ಮಳೆ, ಭೂಕುಸಿತದ ಹಿನ್ನೆಲೆಯಲ್ಲಿ ಸತತ 2ನೇ ದಿನವೂ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಗುಹಾಂತರ ದೇಗುಲದತ್ತ ಹೊರಟಿದ್ದ ಸಾವಿರಾರು ಮಂದಿ ಯಾತ್ರಿಕರು ಜಮ್ಮು ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಯಾರೂ ಆತಂಕಕ್ಕೆ ಒಳಗಾಗಬೇಡಿ. ಹಿರಿಯ ಅಧಿಕಾರಿಗಳು ಪರಿಸ್ಥಿತಿ ಪರಿಶೀಲಿಸುತ್ತಿ ದ್ದಾರೆ’ ಎಂದಿದ್ದಾರೆ. ಭಗವತಿ ನಗರ ಬೇಸ್ ಕ್ಯಾಂಪ್‌ನಿಂದಲೂ ಯಾತ್ರಿಕರ ತಂಡಕ್ಕೆ ಹೊರಡಲು ಅವಕಾಶ ಕೊಟ್ಟಿಲ್ಲ. ಭೂಕುಸಿತದಿಂದ ಪಂಥಿಯಾಲ್ ಸುರಂಗದಲ್ಲಿ ರಸ್ತೆಯ ಒಂದು ಭಾಗವೇ ಕೊಚ್ಚಿ ಹೋಗಿದೆ. ಜು.14ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv