Cnewstv / 05.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
YST ತೆರಿಗೆಯನ್ನು ಕಾಂಗ್ರೆಸ್ನ ಕಾರ್ಯಕರ್ತರಾಗಿ ಬಿಡಿಸಿದ್ದೇವೆ. ಈಗಲಾದರೂ ತನಿಖೆ ಮಾಡಿ.
ಶಿವಮೊಗ್ಗ : YST ತೆರಿಗೆಯನ್ನು ಕಾಂಗ್ರೆಸ್ನ ಕಾರ್ಯಕರ್ತನಾಗಿ ನಾನು ಬಿಡಿಸಿದ್ದೇನೆ. ಈಗಲಾದರೂ ತನಿಖೆ ಮಾಡಿ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ ಗಿರೀಶ್ ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನ ಖಂಡಿಸಿ ಇಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ರವರ ಮನೆಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಮಾಧ್ಯಮದವರು ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನಾಲ್ಕು ವರ್ಷದ ನಂತರ ಎದ್ದು ಬಂದಿದ್ದಾರೆ. ನಿನ್ನೆ ಸದನದಲ್ಲಿ ಆಧಾರ ರಹಿತವಾಗಿ ವೈ ಎಸ್ ಟಿ ತೆರಿಗೆ ಇದೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಯಡಿಯೂರಪ್ಪನವರು ಕೂಡ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷದ ನಂತರ ಇವರಿಗೆ ವೈಎಸ್‌ಡಿ ಎಂದರೇನು ಅಂತ ಅರ್ಥವಾಗಿದೆ.
YST ಅಂದರೆ ಯಡಿಯೂರಪ್ಪ ಅಂಡ್ ಸನ್ ತೆರಿಗೆ ಇದು. ಒಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ನಾನು ಇದನ್ನ ಬಿಡಿಸಿದ್ದೇನೆ. ಇವಾಗಲಾದರೂ ಇದನ್ನು ತನಿಖೆ ಮಾಡಿ. ಚಕ್ಕಿನ ಮೂಲಕ ಲಂಚ ತೆಗೆದುಕೊಂಡ ಯಡಿಯೂರಪ್ಪನವರ ಮಗ ಶಿಕಾರಿಪುರದ ಶಾಸಕರು, ಸೆಂಟ್ರೋ ರವಿ ಪ್ರಕರಣ, ನೋಟಿಫಿಕೇಶನ್ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿಯವರು ನಾಲಕ್ಕುವರೆ ವರ್ಷದ ನಂತರ YST ಎಂದು ಹೇಳಿದ್ದಾರೆ. ಕುಮಾರಸ್ವಾಮಿಯವರಿಗೆ ಯುವ ಕಾಂಗ್ರೆಸ್ ನಿಜವಾಗಿಯೂ ಧನ್ಯವಾದಗಳು ಸಲ್ಲಿಸುತ್ತೇವೆ. ಕುಮಾರಸ್ವಾಮಿ ಅವರು ನಿಜವಾಗಿಯೂ ಮಣ್ಣಿನ ಮಗನೆ ಆಗಿದ್ದರೆ ಕಾಂಗ್ರೆಸ್ಸಿನ ಎಲ್ಲ ಯೋಜನೆಗಳಿಗೆ ಸಹಮತವನ್ನು ವ್ಯಕ್ತಪಡಿಸಿ ಸಹಕಾರವನ್ನು ನೀಡಬೇಕು ಎಂದು ಸರಿ ಮಾಡಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv