Cnewstv / 01.072023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
NSUI ಕಾರ್ಯಕರ್ತರಿಂದ ನಡಿಯಿತಾ ಹಲ್ಲೆ ?? ಸಿನಿಮಿಯಾ ರೀತಿ ನಡುರಾತ್ರಿ ಬಾರ್ ಮುಂದೆ ನಡೆದಿದ್ದೇನು ?? ಇಲ್ಲಿದೆ ವೈರಲ್ ವಿಡಿಯೋ..
ಶಿವಮೊಗ್ಗ : ಸವಾರ್ ಲೈನ್ ರಸ್ತೆಯ ಬಾರ್ ಒಂದರ ಮುಂದೆ ಸಿನಿಮಿಯಾ ರೀತಿಯಲ್ಲಿ ಹೊಡೆದಾಟ ಒಂದು ನಡೆದಿದೆ. ಹಲ್ಲೆ ನಡೆಸಿದ ಯುವಕರ ಗುಂಪು NSUI ಕಾರ್ಯಕರ್ತರದ್ದು ಎಂಬ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಡಿದ ಅಮಲಿನಲ್ಲಿ ನಡುರಾತ್ರಿ ರಸ್ತೆಯ ಮೇಲೆ ಬೀದಿ ಕಾಳಗ ನಡೆಸಿದ್ದು, ಯುವಕನ ಬಟ್ಟೆ ಹರಿಯುವಂತೆ ಹೊಡೆದಿದ್ದಾರೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಭರತ್ ನಾಗ್ ಎಂಬ ಯುವಕನು ಕುಡಿದ ಮತ್ತಿನಲ್ಲಿ ಗುಂಪಾಗಿ ನಿಂತಿದ್ದ NSUI ಕಾರ್ಯಕರ್ತರನ್ನು ಅವ್ಯಾಚ್ಚವಾಗಿ ನಿಂದಿಸಿದ್ದಾನೆ. ನಂತರ ಬಾರ್ ನಿಂದ ಹೊರ ಬಂದು, ಬೈಕ್ ನಲ್ಲಿ ಹೊರಟಿದ್ದ ಸಂದರ್ಭ ದಲ್ಲಿ NSUI ಕಾರ್ಯಕರ್ತರು ರೊಚ್ಚಿಗೆದ್ದು, ಭರತ್ ನಾಗ್ ನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗ ಜಿಲ್ಲಾ NSUI ಜಿಲ್ಲಾಧ್ಯಕ್ಷ ವಿಜಯ್ ನವುಲೆ, ನಗರಾಧ್ಯಕ್ಷ ಹರ್ಷಿತ್, ಚಂದ್ರೋಜಿ ರಾವ್, ರವಿ ರಂಗೇನಹಳ್ಳಿ, ಮಣಿ ಮಲವಗೋಪ್ಪ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಅರ್ ದಾಖಲಾಗಿದೆ.
ಒಟ್ಟಿನಲ್ಲಿ ಕುಡಿದ ನಶೆಯಲ್ಲಿ ಭರ್ಜರಿಯಾಗಿ ಹೊಡೆದಾಡಿಕೊಂಡ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv