Cnewstv / 21.06.2023 / ಮುಂಬೈ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜೂ.20 ವಿಶ್ವದ್ರೋಹಿಗಳ ದಿನವೆಂದು ಘೋಷಿಸಿ! ವಿಶ್ವಸಂಸ್ಥೆಗೆ ಸಂಜಯ್ ರಾವತ್ ಪತ್ರ…
ಮುಂಬೈ : ಜೂ.20 ವಿಶ್ವದ್ರೋಹಿಗಳ ದಿನವೆಂದು ಘೋಷಿಸಿ ಎಂದು ವಿಶ್ವಸಂಸ್ಥೆಗೆ ಮಹಾರಾಷ್ಟ್ರ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಅವರು ಮಂಗಳವಾರ ಪತ್ರ ಬರೆದಿದ್ದಾರೆ.
ಕಳೆದ ವರ್ಷ ಜೂನ್ 20ರಂದು ಶಿವಸೇನೆಯ 40 ಶಾಸಕರು ಶಿವಸೇನೆ ವಿಭಜಿಸಲು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದರು. ಶಿವಸೇನೆ ಈಗ ಎರಡು ಬಣಗಳಾಗಿದೆ.
ಶಿವಸೇನೆ ವಿಭಜನೆಯಾದ ದಿನದ ಹಿನ್ನೆಲೆ ರಾವತ್ ಈ ರೀತಿ ಪತ್ರ ಬರೆದಿದ್ದಾರೆ.
ಟ್ವಿಟರ್‌ನಲ್ಲಿ ಪತ್ರ ಪೋಸ್ಟ್ ಮಾಡಿರುವ ಅವರು, ನನ್ನ ಪಕ್ಷ ಶಿವಸೇನೆ(UBT) ಪಶ್ಚಿಮ ಭಾರತದ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದ ಪಕ್ಷವಾಗಿದೆ. ಇದನ್ನು 1966 ರಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಪ್ರಾರಂಭಿಸಿದರು, ಕಳೆದ ವರ್ಷ ಜೂ.20ರಂದು ಈಗಿನ ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲಿ, ಬಿಜೆಪಿಗರ ಪ್ರಚೋದನೆಯಿಂದ ತಲಾ 50 ಕೋಟಿ ರೂ. ಪಡೆದು 40 ಶಾಸಕರು ಶಿವಸೇನೆ ತೊರೆದರು. ನಮ್ಮ ಬೆನ್ನಿಗೆ ಚೂರಿ ಹಾಕಿದರು.
ಈ ದ್ರೋಹಿಗಳನ್ನು ವಿಶ್ವ ನೆನಪಿಟ್ಟುಕೊಳ್ಳಲಿ. ಹಾಗಾಗಿ ಜೂ.20 ಅನ್ನು ವಿಶ್ವ ದ್ರೋಹಿಗಳ ದಿನವೆಂದು ಘೋಷಿಸಿ ಎಂದು ಮನವಿ ಮಾಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv