Breaking News

ಹೊಸ ಮನೆ, ಬಾಡಿಗೆದಾರರಿಗೆ 58 ಯೂನಿಟ್ ಉಚಿತ

Cnewstv / 13.06.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹೊಸ ಮನೆ, ಬಾಡಿಗೆದಾರರಿಗೆ 58 ಯೂನಿಟ್ ಉಚಿತ

ಬೆಂಗಳೂರು : ಹೊಸ ಮನೆಗಳು ಹಾಗೂ ಹೊಸದಾಗಿ ಬಾಡಿಗೆಗೆ ಬಂದವರಿಗೆ ರಾಜ್ಯದ ಸರಾಸರಿ ಲೆಕ್ಕದಲ್ಲಿ 58 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. 58ಕ್ಕಿಂತ ಹೆಚ್ಚು ಹಾಗೂ 200 ಯೂನಿಟ್‌ ಒಳಗೆ ಬಳಸುವ ವಿದ್ಯುತ್‌ಗೆ ಮಾತ್ರ ಈ ಗ್ರಾಹಕರು ಬಿಲ್‌ ಪಡೆಯಲಾಗುತ್ತದೆ.

ಹೊಸ ಮನೆ ಹಾಗೂ ಬಾಡಿಗೆದಾರ ಗ್ರಾಹಕರು ಇದ್ದ ಗೊಂದಲಗಳನ್ನು ನಿವಾರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಎರಡು ಬಗೆಯ ಗ್ರಾಹಕರು ಸರಾಸರಿ ವಿದ್ಯುತ್ ಬಳಕೆ ಲೆಕ್ಕಾಚಾರ ಅನುಸರಿಸುತ್ತಾರೆ. ರಾಜ್ಯದ ಸರಾಸರಿ ಬಳಕೆ 53 ಯೂನಿಟ್ ಇದ್ದು, ಅದರ ಜೊತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ಸೇರಿಸಿ ಒಟ್ಟು 58 ಯೂನಿಟ್‌ ಅವರಿಗೆ ಉಚಿತವಾಗಿ ಸಿಗಲಿದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.

ಒಂದು ವೇಳೆ 58 ಯೂನಿಟ್‌ಗಿಂತ ಜಾಸ್ತಿ ಬಳಸಿದರೆ ಹೆಚ್ಚುವರಿ ಬಳಕೆಯ ಯೂನಿಟ್‌ಗಳಿಗೆ ಬಿಲ್ ಪಾವತಿಸಲಾಗುತ್ತದೆ. 200 ಯೂನಿಟ್‌ ಮೀರಿದರೆ ಪೂರ್ಣ ಬಿಲ್‌ ಪಾವತಿಸಲಾಗಿದೆ. ವರ್ಷದ ಸರಾಸರಿ ಅಂದಾಜು ಲೆಕ್ಕ ಹಾಕ  ನಂತರ ಎಂದು ಹೇಳಿದರು. ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಬಾರದು, ಸಾರ್ವಜನಿಕರು ಮನವಿ ಮಾಡಿದರು.

ಹಿಂದೆ ವಿದ್ಯುತ್ ದರದಲ್ಲಿ 4 ಸ್ಲಾಬ್‌ಗಳಿದ್ದವು. 0 ರಿಂದ 50 ಯೂನಿಟ್‌ವರೆಗೆ 4.15 ರೂ., 51 ರಿಂದ 100 ರೂ.ಗೆ 5.60 ರೂ., 101 ರಿಂದ 200 ರ ವರೆಗೆ 7.15 ರೂ., 200 ಕ್ಕಿಂತ ಹೆಚ್ಚಿಗೆ ಇದ್ದರೆ 8.20 ರೂ. ನಿಗದಿಯಾಗಿತ್ತು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*