Breaking News

ಪೊಲೀಸರ ಎದುರಲ್ಲೇ ಚಾಕುವಿನಿಂದ ಚುಚ್ಚಿ ಕೊಲೆ.

Cnewstv / 05.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪೊಲೀಸರ ಎದುರಲ್ಲೇ ಚಾಕುವಿನಿಂದ ಚುಚ್ಚಿ ಕೊಲೆ.

ಶಿವಮೊಗ್ಗ : ಪೊಲೀಸರ ಎದುರಲ್ಲೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಆಯನೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಸೊರಬ ಮೂಲದ ಸಚಿನ್ (27) ಕೊಲೆಗೆ ಈಡಾದ ದುರ್ದೈವಿ.
ಬಾರ್ ನಲ್ಲಿ ಕುಡಿಯುತ್ತಿದ್ದ ಆರೋಪಿಗಳಿಗೆ ಸಮಯ ಆಗಿದೆ ಹೊರಗೆ ಹೋಗಿ ಎಂದಿದ್ದಕ್ಕೆ ಕೊಲೆ ನಡೆದಿದೆ. ಬಾರ್ ಕ್ಯಾಶಿಯರ್ ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು.

ಕಳೆದ ಹಲವು ದಿನಗಳಿಂದ ಬಾರ್ ನಲ್ಲಿ ಕುಡಿದು ಹಣ ನೀಡದ ಹೋಗುತ್ತಿದ್ದರು.‌ ಕಳೆದ ರಾತ್ರಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದ ವರೆಗೂ ಮದ್ಯಪಾನ ಮಾಡುತ್ತಿದ್ದ ನಿರಂಜನ್ , ಸತೀಶ್ ಹಾಗೂ ಆಶೋಕ್ ನಾಯ್ಕ್ ಗೆ ಟೈ ಆಗಿದೆ ಎದ್ದು ಹೋಗಿ ಎಂದಿದ್ದಕ್ಕೆ ಕೋಪ ಗೊಂಡ ಮೂವರು ಹಲ್ಲೆಗೆ ಮುಂದಾಗಿದ್ದಾರೆ.

ತಕ್ಷಣ ಬಾರ್ ನ ಸಿಬ್ಬಂದಿಗಳು 112 ಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ ಅದರೆ ಪೊಲೀಸರ ಎದುರಲ್ಲೇ ಸಚಿನ್‌ ನ ಎದೆಯ ಭಾಗಕ್ಕೆ ಚಾಕುವಿನಿಂದ ದುಷ್ಕರ್ಮಿಗಳು ಚುಚ್ಚಿದಾರೆ.

ನಂತರ ಸಚಿನ್ ನನ್ನು ಆಯನೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೂ ಬಂದು ದುಷ್ಕರ್ಮಿಗಳು ಹಲ್ಲೆ ಮಾಡಲು ಯತ್ನಿಸಿದಾರೆ. ಹೆಚ್ಚಿನ ಚಿಕಿತ್ಸೆ ಗಾಗಿ ಸಚಿನ್‌ ನನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತು ಅದರೆ ಮಾರ್ಗ ಮಧ್ಯದಲ್ಲಿ ಸಚಿನ್ ಕೊನೆ ಉಸಿರೆಳೆದಿದ್ದಾನೆ.

ಮೂವರು ದುಷ್ಕರ್ಮಿಗಳನ್ನು ಪೋಲಿಸರು ಬಂದಿಸಿದ್ದಾರೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*