Cnewstv / 30.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವರುಣನ ಆಗಮನದಿಂದ ತಂಪಾದ ಮಲೆನಾಡು..
ಶಿವಮೊಗ್ಗ : ಕಳೆದ ಕೆಲವು ತಿಂಗಳಿನಿಂದ ಬಿಸಿಲ ಜಳದಿಂದ ಬಳಲುತ್ತಿದ್ದ ಶಿವಮೊಗ್ಗ ನಗರದ ಜನತೆಗೆ ಇಂದು ಬಿಗ್ ರಿಲೀಸ್ ಸಿಕ್ಕಿದೆ. ಶಿವಮೊಗ್ಗ ನಗರ ಕೂಲ್ ಆಗಿದೆ.
ನಿನ್ನೆ ಸಂಜೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಇಂದು ಮಲೆನಾಡಿನಾದ್ಯಂತ ಸಂಪೂರ್ಣವಾಗಿ ಕಪ್ಪು ಮೋಡ ಕವಿದು ತಂಪಾದ ವಾತಾವರಣದೆ. ಬಿರುಬಿಸಿಲಿನಿಂದ ತಪಮಾನ ಗಣನೀಯವಾಗಿ ಹೆಚ್ಚಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಏಕಾಏಕಿ ಕೂಲ್ ಅಗಿದೆ. ಇನ್ನು ಕೆಲವು ಕಡೆ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನಾಳೆಯ ತನಕವೂ ಕೂಡ ಇದೇ ರೀತಿಯ ವಾತಾವರಣವಿರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ವರುಣನ ಆಗಮನಿಂದ ಶಿವಮೊಗ್ಗ ಕೂಲ್ ಅಗಿದೆ. ಸಂಜೆಯ ನಂತರ ಮತ್ತಷ್ಟು ಮಳೆಯಾಗಬಹುದು ಎನ್ನಲಾಗುತ್ತಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv