Cnewstv / 17.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ.
ಶಿವಮೊಗ್ಗ : ಶಿವಮೊಗ್ಗ ನಗರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಸ್ ಎನ್ ಚನ್ನಬಸಪ್ಪನವರು, ಇಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ, ನನ್ನ ಮತದಾರರ ನಂಬಿಕೆಗೆ ಚುತಿ ಬರುವಂತೆ ನಾನು ಎಂದು ನಡೆದುಕೊಳ್ಳುವುದಿಲ್ಲ, ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ ಎಂದು ಹೇಳಿದರು.
ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು, ಶಿವಮೊಗ್ಗ ಮತದಾರರಿಗೆ ಮೊದಲು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತದಾರ ಪ್ರಭುಗಳು ಮತವನ್ನು ದಾನ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ಆಶೀರ್ವಾದ ಮಾಡಿದ್ದಾರೆ. ಆ ದಾನವನ್ನು ಸ್ವೀಕರಿಸಿದಂತಹ ಬಿಜೆಪಿ ಮತದಾರರ ನಂಬಿಕೆಗೆ ಚುತಿ ಬರುವಂತೆ ನಡೆದುಕೊಳ್ಳುವುದಿಲ್ಲ.
ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ. ಸುಮಾರು 10 ರಿಂದ 12 ಸಾವಿರ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಗೆಲುವು ಸಾಧಿಸಿದ್ದೇವೆ. ಇದು ಒಂದು ವಿಚಾರಕ್ಕೆ ಅಭಿವೃದ್ಧಿಗೆ ಸಿಕ್ಕಂತ ಗೆಲುವು. ಈ ಗೆಲುವಿನ ಒಟ್ಟು ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜವಾಬ್ದಾರಿ ಏನು ಎಂದು ಅರ್ಥ ಮಾಡಿಕೊಂಡು ಕಾರ್ಯವನ್ನು ಮಾಡುತ್ತೇನೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರೆ.
ಸಂಪೂರ್ಣ ಮಾಹಿತಿಗಾಗಿ ವಿಡಿಯೋ ಲಿಂಕ್ ನೋಡಿ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv