Breaking News

ಕ್ರಿಕೆಟ್ ಆಡುವಾಗ ಕ್ಷುಲಕ ವಿಚಾರಕ್ಕೆ ಜಗಳ ಬ್ಯಾಟ್ ನಿಂದ ಹಲ್ಲೆ.

Cnewstv / 17.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕ್ರಿಕೆಟ್ ಆಡುವಾಗ ಕ್ಷುಲಕ ವಿಚಾರಕ್ಕೆ ಜಗಳ ಬ್ಯಾಟ್ ನಿಂದ ಹಲ್ಲೆ.

ಶಿವಮೊಗ್ಗ : ಕ್ರಿಕೆಟ್ ಆಡುವಾಗ ಕ್ಷುಲಕ ವಿಚಾರಕ್ಕೆ ಆರಂಭವಾದ ಜಗಳ ಹಲ್ಲೆಯ ರೂಪ ಪಡೆದುಕೊಂಡಿದೆ.

ಭಾನುವಾರ ಮಧ್ಯಾನ ದೇವಕಾತಿಕೊಪ್ಪ ಹೊಸ ಲೇಔಟ್ ನಲ್ಲಿ ಹುಡುಗರು ಕ್ರಿಕೆಟ್ ಆಡುವಾಗ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ.‌ ಘಟನೆಯಲ್ಲಿ ಇಬ್ಬರು ಯುವಕರು ಸುಧಾಕರ್ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಒಬ್ಬನು ಸುಧಾಕರ್ ತಲೆಗೆ ಗುದ್ದಿದರೆ ಮತ್ತೊಬ್ಬನು ಸುಧಾಕರ್ ಮುಖಕ್ಕೆ ಗುದ್ದಿದ್ದಾನೆ.‌

ತೀವ್ರ ನೋವು ಅನುಭವಿಸುತ್ತಿದ್ದ ಸುಧಾಕರ್ ನನ್ನು ಉಳಿದ ಯುವಕರು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಘಟನೆಗೆಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*