Breaking News

ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮಿನಲ್ಲಿ ಭದ್ರಾ..

Cnewstv / 10.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮಿನಲ್ಲಿ ಭದ್ರಾ..

ಶಿವಮೊಗ್ಗ : 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಶಾಂತಿಯುತವಾಗಿ ಜಿಲ್ಲೆಯಲ್ಲಿ ನಡೆದಿದೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿದೆ

ಬೆಳಗ್ಗೆ ಏಳು ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ ಆರು ಗಂಟೆಗೆ ಪೂರ್ಣಗೊಂಡಿದೆ.‌ ಶಿವಮೊಗ್ಗ 68.74, ಶಿವಮೊಗ್ಗ ಗ್ರಾಮಾಂತರ 83.71, ಭದ್ರಾವತಿ 68.47, ತೀರ್ಥಹಳ್ಳಿ 84.83, ಶಿಕಾರಿಪುರ 82.57, ಸೊರಬ 82.97, ಸಾಗರ 80.29. ಜಿಲ್ಲೆಯಲ್ಲಿ ಒಟ್ಟಾರೆ ಶೇ78.28ರಷ್ಟು ಮತದಾನವಾಗಿದೆ.‌ ಇನ್ನೆರಡು ದಿನಗಳಲ್ಲಿಅಭ್ಯರ್ಥಿಯ ಭವಿಷ್ಯ ಹೊರಬೀಳಲಿದೆ.‌

ಎಲ್ಲಾ ಮತ ಕೇಂದ್ರಗಳ ಯಂತ್ರಗಳನ್ನು ಭಾರಿ ಭದ್ರತೆಯೊಂದಿಗೆ ಸಹ್ಯಾದ್ರಿ ಕಾಲೇಜಿಗೆ ತಂದಿಡಲಾಗಿದ್ದು, ಭಾರಿ ಭದ್ರತೆಯನ್ನು ಮಾಡಲಾಗಿದೆ ಹೆಚ್ಚುವರಿ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿದೆ.‌ ಏ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲಾ ಚುನಾವಣೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಸ್ಟ್ರಾಂಗ್ ರೂಮಿನ ತೆಗೆದು ಮತಯಂತ್ರಗಳನ್ನು ಹೊರ ತೆಗೆದು ಮತ ಎಣಿಕೆ ಕಾರ್ಯ ಮಾಡಲಾಗುತ್ತದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*