Breaking News

ಹಕ್ಕಿಪಿಕ್ಕಿ ಜನಾಂಗದವರಿಗಾಗಿ ವಿಶೇಷ ಮತಗಟ್ಟೆ.

Cnewstv / 10.05.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಹಕ್ಕಿಪಿಕ್ಕಿ ಜನಾಂಗದವರಿಗಾಗಿ ವಿಶೇಷ ಮತಗಟ್ಟೆ.

ಶಿವಮೊಗ್ಗ : ಹಕ್ಕಿಪಿಕ್ಕಿ ಜನಾಂಗದವರಿಗಾಗಿ ವಿಶೇಷವಾದಂತಹ ಮತಗಟ್ಟೆ ಒಂದನ್ನು ಸ್ಥಾಪನೆ ಮಾಡಲಾಗಿದೆ.‌

ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಒಂಬತ್ತು ವಿಶೇಷ ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ ಅದರಲ್ಲೂ ಕೂಡ ಸೂಡನ್ ಯುದ್ಧಪೀಡಿತ ಪ್ರದೇಶದಿಂದ ತವರಿಗೆ ಮರಳಿದ ಜನರಿಗಾಗಿಯೇ ಚುನಾವಣಾ ಇಲಾಖೆಯು ವಿಶೇಷವಾದಂತಹ ಮತಗಟ್ಟೆಯನ್ನು ಸ್ಥಾಪನೆ ಮಾಡಲಾಗಿದೆ.

ಮೋದಿ ಅವರ ಮನ ಗೆದ್ದಂತಹ ಈ ಸಮುದಾಯದವರ ಜೊತೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಶಿವಮೊಗ್ಗಕ್ಕೆ ಬಂದ ಸಂದರ್ಭ ದಲ್ಲಿ ಸಂವಾದವನ್ನು ಕೂಡ ನಡೆಸಿದ್ದರು.

ಸಾವಿರಕ್ಕೂ ಹೆಚ್ಚು ಮತದಾರವಿರುವಂತಹ ಈ ಸಮುದಾಯದವರಿಗಾಗಿ ಈ ವಿಭಿನ್ನವಾದ ಮತಗಟ್ಟೆಯನ್ನು ಹಸೂಡಿ ಫಾರಂನಲ್ಲಿ ಸ್ಥಾಪನೆ ಮಾಡಲಾಗಿದೆ. ಚುನಾವಣಾ ಇಲಾಖೆಯ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಮತದಾರರನ್ನು ತನ್ನತ್ತ ಸೆಳೆಯುತ್ತಿದೆ.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*