Cnewstv / 03.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಗಣೇಶ ಹಬ್ಬ, ಯಾವ ಹಬ್ಬ ಬಂದರೂ ಒಂದೇರಡು ಬೀಳಬೇಕು ??
ಶಿವಮೊಗ್ಗ : ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಜೆಡಿಎಸ್ ಬಹಿರಂಗ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳಿಗೆ ನೀವೆಲ್ಲರೂ ಬೆಂಬಲ ನೀಡಬೇಕು. ಇದೇ ಜಿಲ್ಲೆಯಲ್ಲಿ ಹುಟ್ಟಿದ ಕುವೆಂಪು ಸರ್ವಜನಾಂಗದ ತೋಟ ಎಂದರು. ಅದರೆ, ಬಿಜೆಪಿಯವರು ಅದನ್ನು ಮಾಡ್ತಾ ಇದ್ದಾರಾ..? ರಕ್ತದೋಕುಳಿ ಮಾಡ್ತಾ ಇದ್ದಾರೆ. ಗಣೇಶ ಹಬ್ಬ, ಯಾವ ಹಬ್ಬ ಬಂದರೂ ಒಂದೇರಡು ಬೀಳಬೇಕು..ಅದರಲ್ಲಿ ನೀವು ಅಧಿಕಾರವನ್ನು ಕಟ್ಟಿಕೊಳ್ಳಬೇಕು..ಇದೆಲ್ಲವೂ ಕೊನೆಯಾಗಬೇಕು.. ಅದಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದರು.
ಬಿಜೆಪಿ ಕಿರಾತಕರ ನಡುವೆ ನಾವು ಚುನಾವಣೆ ಮಾಡೋದು ಹೇಗೆ ಎಂದು ಅಭ್ಯರ್ಥಿಗಳು ಕೇಳ್ತಾರೆ..ನಾವು ಅಧಿಕಾರದಲ್ಲಿ ಇದ್ದಾಗ ಎಂದು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ಆಗ ಲೂಟಿ ಹೊಡೆದಿದ್ರೆ, ಇಂದು ಬಿಜೆಪಿಗೆ ಪೈಪೋಟಿ ನೀಡಿ ಹಣ ಕೊಡಬಹುದಿತ್ತು. ಮಕ್ಕಳ ಶಿಕ್ಷಣಕ್ಕೆ ಸರ್ಕಾರವೇ ಹಣ ಕೊಡುವ ಯೋಜನೆ ತರುತ್ತೆನೆ. ಮಕ್ಕಳ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡೋದು ದೊಡ್ಡ ವಿಷಯ ಅಲ್ಲ. ಎನ್ ಪಿಎಸ್ ರದ್ದುಗೊಳಿಸಿ, ಓಪಿಎಸ್ ತರುತ್ತೇವೆ.. ನನ್ನ ಬಿಟ್ಟು ಇವರು ಯಾರು ಮುಖ್ಯಮಂತ್ರಿ ಅಗಲ್ಲಾ. ದೇವರ ಆಶೀರ್ವಾದ ಇದೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv