Cnewstv / 03.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಜರಂಗದಳ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಜೇನು ಗೂಡಿಗೆ ಕೈ ಹಾಕಿದಂತೆ
ಶಿವಮೊಗ್ಗ : ಬಜರಂಗದಳವನ್ನು ನಿಷೇಧ ಮಾಡುವುದನ್ನು ಹೇಳಿಕೆ ನೀಡಿದ ಕಾಂಗ್ರೆಸ್ಸಿಗರಿಗೆ ಜಿಲ್ಲಾ ಬಜರಂಗದಳದ ವತಿಯಿಂದ ಖಡಕ್ ಎಚ್ಚರಿಕೆಯನ್ನು ನೀಡಲಾಯಿತು.
2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂದರ್ಭ ಬಜರಂಗದಳವನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡುವ ಉಲ್ಲೇಖ ಮಾಡಿರುವಂತದ್ದು
ಅತ್ಯಂತ ಖಂಡನೀಯ.
ಪಿಎಫ್ಐ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ರಾಷ್ಟ್ರೀಯ ವಾದಿ ವಿಚಾರಗಳನ್ನು ಒಳಗೊಂಡಿರುವ ಬಜರಂಗದಳವನ್ನು ಹೋಲಿಸಿರುವುದು ತಪ್ಪು. ಸಿದ್ದರಾಮಯ್ಯನವರಿಗೆ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಬಜರಂಗದಳ ಎಂದರೇನು ಎಂದೇ ಗೊತ್ತಿಲ್ಲ. ಬಜರಂಗದಳ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಜೇನು ಗೂಡಿಗೆ ಕೈ ಹಾಕಿದಂತೆ ಎಂದು ಎಚ್ಚರಿಕೆ ನೀಡಿದರು.
ಹಿಂದುಗಳ ಆರಾಧ್ಯಮೂರ್ತಿಯಾಗಿರುವಂತಹ ಗೋಮಾತೆಯನ್ನು ಇಡೀ ದೇಶದಲ್ಲಿ ರಕ್ಷಣೆ ಮಾಡಿದ್ದು ಇದೇ ಬಜರಂಗದಳ ರಕ್ಷಣೆ ಮಾಡಿದ ಲಕ್ಷಾಂತರಗೋಹಗಳ ಶಾಪವೇ ತಮ್ಮ ಪಕ್ಷಕ್ಕೆ ತಟ್ಟಲಿದೆ. ಜಿಹಾದಿ ಮಾನಸಿಕತೆಯದಂತಹ ಭೂತದಿಂದ ತಾಯಂದಿರ ಮಾನ ಪ್ರಾಣ ರಕ್ಷಣೆ ಮಾಡಿದ ಕಣ್ಣೀರು ಒರೆಸಿದ ಸಂಘಟನೆಯ ಬಜರಂಗದಳ ಬಜರಂಗದಳದ ವಿಷಯಕ್ಕೆ ಬಂದರೆ ರಾಜ್ಯದ ಮಾತೆಯಂದಿರೆ ತಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಶಿವಮೊಗ್ಗ ಭಾಗ ಸಂಯೋಜಕರಾದ ರಾಜೇಶ್ ಗೌಡ, ಸಹ ಸಂಯೋಜಕ ಅಂಕುಶ್, ನಾಗೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments