Cnewstv / 27.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಾಡಗೀತೆ ಹಾಡುವಾಗ ಅಚಾತುರ್ಯ, ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪ.
ಶಿವಮೊಗ್ಗ : ಕನ್ನಡ ನಾಡಗೀತೆಗೆ ಅವಮಾನ ಆಗುತ್ತಿದ್ದನ್ನು ಕಂಡು ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪನವರು ತಕ್ಷಣವೇ ಸರಿಮಾಡಿದ ಘಟನೆ ಇಂದು ನಡೆದಿದೆ.
ಶಿವಮೊಗ್ಗದ ಎನ ಇ ಎಸ್ ಮೈದಾನದಲ್ಲಿ ಇಂದು ಬಿಜೆಪಿ ತಮಿಳು ಬಾಂಧವರ ಸಮಾವೇಶ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಅಗಮಿಸಿದ್ದರು. ಈ ವೇಳೆ
ನಾಡಗೀತೆ ಹಾಡುವಾಗ ಅಚಾತುರ್ಯ ನಡೆದಿದೆ.
https://youtu.be/mL1r5fLvvG8
ನಾಡಗೀತೆ ಹಾಕಿ ಎಂದಾಗ ಅಯೋಜಕರು ತಮಿಳು ನಾಡಗೀತೆ ಹಾಕಿದ್ದಾರೆ. ತಕ್ಷಣವೇ ವೇದಿಕೆಯಲ್ಲಿ ಇದ್ದ ಕೆ ಎಸ್ ಈಶ್ವರಪ್ಪ ಮಧ್ಯೆ ಪ್ರವೇಶ ಮಾಡಿ, ನಾಡಗೀತೆ ಹಾಡುವುದಕ್ಕೆ ಬರುವುದಿಲ್ವ ಎಂದು ಪ್ರಶ್ನಿಸಿ, ಕನ್ನಡದ ನಾಡಗೀತೆ ಹಾಕಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv