Cnewstv / 26.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಂದಿನಿಂದ ಬಿಜೆಪಿ ಪ್ರಚಾರದಲ್ಲಿ ಕಿಚ್ಚನ ಅಬ್ಬರ.
ಬೆಂಗಳೂರು : ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಕಿಚ್ಚ ಸುದೀಪ್ ಮತಯಾಚನೆ ಮಾಡಲಿದ್ದಾರೆ.
ಮತಯಾಚನೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನಿಂದ ನನ್ನ ಪ್ರಚಾರ ಆರಂಭವಾಗಿದೆ. ರೋಡ್ ಶೋ ಗೆ ಹೋಗದೆ ತುಂಬಾ ವರ್ಷಗಳೇ ಆಗಿದೆ. ಬಿಸಿಲ ನಡುವೆಯೂ ನಾನು ಪ್ರಚಾರ ಮಾಡುತ್ತೇನೆ. ಜನರನ್ನು ಭೇಟಿಯಾಗುತ್ತಿರುವುದು ಖುಷಿಯಾಗಿದೆ ಎಂದರು.
ಎಲ್ಲೆಲ್ಲಿ ರೋಡ್ ಶೋ ??
* ಬೆಳಗ್ಗೆ 10:55 ಕ್ಕೆ ಮೊಳಕಾಲ್ಮುರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
* ಮಧ್ಯಾಹ್ನ 12:30ಕ್ಕೆ ಜಗಳೂರಿನಲ್ಲಿ ರೋಡ್ ಶೋ.
* ಮಧ್ಯಾಹ್ನ 3.10 ಕ್ಕೆ ಮಾಯಕೊಂಡದಲ್ಲಿ ಸಾರ್ವಜನಿಕ ಸಭೆ.
* ಸಂಜೆ 4:20ಕ್ಕೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಪ್ರಚಾರ.
* ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ರೋಡ್ ಶೋ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv