Breaking News

ಪ್ರಮೋದ್ ಮುತಾಲಿಕ್ ರವರ ಮೇಲಿರುವ ಪ್ರಕರಣಗಳು ಹಾಗೂ ಆಸ್ತಿ ಎಷ್ಟು ಗೊತ್ತಾ ??

Cnewstv / 19.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪ್ರಮೋದ್ ಮುತಾಲಿಕ್ ರವರ ಮೇಲಿರುವ ಪ್ರಕರಣಗಳು ಹಾಗೂ ಆಸ್ತಿ ಎಷ್ಟು ಗೊತ್ತಾ ??

ಉಡುಪಿ : ಇಂದು ಶ್ರೀರಾಮ ಸೈನ್ಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಆಸ್ತಿ ವಿವರ ಸಲ್ಲಿಸಿದ್ದು, ಅದರಲ್ಲಿ ಆಸ್ತಿಯ ಮೊತ್ತವು ಅತ್ಯಂತ ಕಡಿಮೆ ಇದೆ ಆದರೆ ರಾಜ್ಯದ 7 ವಿವಿಧ ಪೊಲೀಸ್ ಠಾಣೆಗಳಲ್ಲಿ ಸೌಹಾರ್ದಕ್ಕೆ ತಂದಿರುವ ಆರೋಪದ ಅಡಿಯಲ್ಲಿ ಪ್ರಕರಣಗಳಿವೆ.‌

ಹೌದು ಪ್ರಮೋದ್ ಮುತಾಲಿಕ್ ಅವರು ಒಬ್ಬಂಟಿಯಾಗಿದ್ದು ಅವರಿಗೆ ಯಾವುದೇ ಕುಟುಂಬ ಪತ್ನಿ ಅಥವಾ ಅವರನ್ನು ಅವಲಂಬಿತರು ಇಲ್ಲ. ಅವರ ಬಳಿ ಯಾವುದೇ ಬೆಳೆ ಬಾಳುವ ವಸ್ತುಗಳು ಮನೆ ಕಾರು ವಾಹನ ಚಿನ್ನಾಭರಣಗಳು ಕೂಡ ಇಲ್ಲ ಬದಲಾಗಿ ರಾಜ್ಯದ ವಿವಿಧ 7 ಠಾಣೆಗಳಲ್ಲಿ ಕೋಮುಗಳಭೆ ಜೀವ ಬೆದರಿಕೆ ಪ್ರಚೋದನಾಕಾರಿ ಹೇಳಿಕೆ ಮತೀಯ ಭಾವನೆಗಳಿಗೆ ಧಕ್ಕೆ ಸೇರಿದಂತೆ ಒಟ್ಟು 7 ಪ್ರಕರಣಗಳು ಅವರ ಮೇಲಿದೆ.

ಪ್ರಸ್ತುತ ಪ್ರಮೋದ್ ಮುತಾಲಿಕ್ಕ ಅವರ ಕೈಯಲ್ಲಿ 10,500 ನಗದು ಬ್ಯಾಂಕಿನಲ್ಲಿ 2,63,500 ಠೇವಣಿ ಹಣ ಬಿಟ್ಟರೆ ಯಾವುದೇ ಸ್ಥಿರ ಚರಾಸ್ತಿಗಳಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*