Breaking News

ಆನ್‌ಲೈನ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿಗಳ ಬಂಧನ. ಬರೋಬ್ಬರಿ 25 ಲಕ್ಷ ಮೌಲ್ಯ ಜಪ್ತಿ.

Cnewstv / 18.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಆನ್‌ಲೈನ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿತರ ಬಂಧನ. ಸುಮಾರು 25 ಲಕ್ಷ ಮೌಲ್ಯ ಜಪ್ತಿ.

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕ್ರಿಕೇಟ್ ಬೆಟ್ಟಿಂಗ್ / ಮಟ್ಕಾ/ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಸ್ ಪಿ ಮಿಥುನ್ ಕುಮಾರ್, ಹಾಗೂ ಜಿ. ಕೆ, ಅನಿಲ್ ಕುಮಾರ್ ಭೂಮರಡ್ಡಿ, ಪ್ರಭು ಡಿ.ಟಿ. ಡಿ.ವೈ.ಎಸ್.ಪಿ, ಡಿ.ಸಿ.ಆರ್.ಬಿ ಮತ್ತು ಬಿ. ಬಾಲರಾಜು, ಡಿ.ವೈ.ಎಸ್.ಪಿ. ಶಿವಮೊಗ್ಗ-ಎ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಿ ದಾಳಿ ಮಾಡಲು ಶ್ರೀ ಸಂತೋಷ್ ಪಾಟೀಲ್, ಪಿ.ಐ, ಸಿ.ಇ.ಎನ್ ಪೊಲೀಸ್ ಠಾಣೆ ಶಿವಮೊಗ್ಗರವರ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿರುತ್ತದೆ.

ದಿನಾಂಕ:15-04-2023 ರಂದು ಸದರಿ ವಿಶೇಷ ತಂಡವು ಮಾಹಿತಿಯನ್ನು ಸಂಗ್ರಹಿಸಿ ಶಿವಮೊಗ್ಗ ನಗರದಲ್ಲಿ
ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ದಾಳಿ ಮಾಡಿ ಸತೀಶ ಹಾಗು ಇತರೆ 03 ಜನ ಆರೋಪಿಗಳಿಂದ
ಒಟ್ಟು ರೂ. 7,20,000/- ನಗದು ಹಣ, 03 ಮೊಬೈಲ್ ಫೋನ್ ಗಳು ಮತ್ತು 1 ಮೊಪೆಡ್ ಬೈಕ್ ಅನ್ನು ವಶ ಪಡಿಸಿಕೊಂಡು, ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 34/2023 ಕಲಂ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ದಿನಾಂಕ:16-04-2023 ರಂದು ಶಿವಮೊಗ್ಗ ನಗರದ ವಾಸಿ ಶ್ರೀ ಕಾರ್ತಿಕ್ ರವರು ತನ್ನ ಸ್ನೇಹಿತನಾದ ಸತೀಶನು ಆನ್ ಲೈನ್ ವೆಬ್‌ಸೈಟ್/ ಆಪ್‌ನಲ್ಲಿ ಕ್ರಿಕೆಟ್ ಬೆಟ್ಟಂಗ್ ಜೂಜಾಟ ಆಡಿಸುತಿದ್ದು, ಕಾರ್ತಿಕ್ ನಿಗೂ ಸಹಾ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡು ಹೆಚ್ಚಿನ ಹಣವನ್ನು ಗಳಿಸಿಕೊಡುತ್ತೇನೆಂದು ಹೇಳಿದ್ದರಿಂದ, 3 ರಿಂದ 4 ವರ್ಷಗಳಿಂದ ಸತೀಶನಿಗೆ
ಹಣವನ್ನು ಕೊಡುತ್ತಾ ಬಂದಿದ್ದು, ಆದರೆ ಆತನು ನಾನು ಕೊಟ್ಟ ಹಣವನ್ನು ವಾಪಸ್ ಕೊಡದೇ ಬೆಟ್ಟಿಂಗ್‌ನಲ್ಲಿ ನಿಮ್ಮ ಹಣ
ಹೋಯಿತು ಅಂತ ಹೇಳಿ ಸುಮಾರು ‘ರೂ. 3,00,000/- ಹಣವನ್ನು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 36/2023 ಕಲಂ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 420 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.‌ ಆರೋಪಿತ ಸತೀಶ ವೈ ಈತನು ಆನ್ ಲೈನ್ ಬೆಟ್ಟಿಂಗ್ ಆಪ್ /ವೆಬ್ ಸೈಟ್ಗಳಲ್ಲಿ ಹೂಡಿಕೆ ಮಾಡಿದ್ದ
“ಒಟ್ಟು 18,26,336 ರೂ ಹಣವನ್ನು ಜಪ್ತಿ ಮಾಡಿ, 02 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು, ಸದರಿ ಪ್ರಕರಣವೂ ಸೇರಿದಂತೆ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ “ಒಟ್ಟು 25,46,336/- ರೂ. ಗಳನ್ನು ಜಪ್ತಿ ಮಾಡಿ, 05 ಮೊಬೈಲ್ ಫೋನ್ ಗಳು ಮತ್ತು 1 ಮೊಪೆಡ್ ಬೈಕ್ ಅನ್ನು ವಶ ಪಡಿಸಿಕೊಂಡು, ಆರೋಪಿ ಸತೀಶ್, 28 ವರ್ಷ, ಹೊಸಮನೆ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಸದರಿ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗಜಿಲ್ಲೆ ರವರು ಅಭಿನಂದಿಸಿರುತ್ತಾರೆ.

ಸಾರ್ವಜನಿಕರ ಗಮನಕ್ಕೆ.

1. ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳು ಕಾನೂನು ಬಾಹಿರ ಚಟುವಟಿಕೆಗಳಾಗಿದ್ದು
ಅವುಗಳಲ್ಲಿ ತೊಡಗಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

2. ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳಿಂದ ಆರ್ಥಿಕ ನಷ್ಟ, ಮಾನ ಹಾನಿ, ಪ್ರಾಣ ಹಾನಿ ಉಂಟಾಗುತ್ತದೆ ಆದ್ದರಿಂದ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು.

3. ಯಾರಾದರೂ ನಿಮ್ಮ ಸುತಮುತ್ತಲು
ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ 112 ತುರ್ತು ಸಹಾಯವಾಣಿ / ಹತ್ತಿರದ ಪೊಲೀಸ್ ಠಾಣೆ | ಪೊಲೀಸ್ ಕಂಟ್ರೋಲ್ ರೂಂ ನಂ 9480803300/ 08182-
261413 ಗೆ ಮಾಹಿತಿ ನೀಡುವುದು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*