Breaking News

ಕಾಂಗ್ರೆಸ್ ಪಕ್ಷದ ಇಂತಹ ನಿರ್ಧಾರಗಳು ಶವಪೆಟ್ಟಿಗೆಗೆ ಮೊಳೆ ಹೊಡೆದಂತೆ – ಕೆ ಸಿ ನಾರಾಯಣಸ್ವಾಮಿ

Cnewstv / 16.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಗ್ರೆಸ್ ಪಕ್ಷದ ಇಂತಹ ನಿರ್ಧಾರಗಳು ಶವಪೆಟ್ಟಿಗೆಗೆ ಮೊಳೆ ಹೊಡೆದಂತೆ – ಕೆ ಸಿ ನಾರಾಯಣಸ್ವಾಮಿ

ಶಿವಮೊಗ್ಗ : ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಶವಪೆಟ್ಟಿಗೆಗೆ ಮೊಳೆ ಹೊಡೆದಂತೆ ಎಂದು ಕೆ ಸಿ ನಾರಾಯಣಸ್ವಾಮಿ ಹೇಳಿದರು.

ಶಿವಮೊಗ್ಗ ಗ್ರಾಮಾಂತರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿದ್ದಂತಹ ಕೆ ಸಿ ನಾರಾಯಣಸ್ವಾಮಿ ಅವರ ಹೆಸರನ್ನು ಮೂರನೇ ಪಟ್ಟಿಯಲ್ಲಿ ಕೈ ಬಿಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಂಡಾಯವಾಗಿ ಸ್ಪರ್ಧೆ ಮಾಡಲು ಕೆಸಿ ನಾರಾಯಣಸ್ವಾಮಿ ಅವರು ನಿರ್ಧಾರ ಮಾಡಿದ್ದಾರೆ.‌ ಅಭಿಮಾನಿಗಳ ಒತ್ತಾಯಕ್ಕೆ ಮಾಡಿದ್ದು ಗುರುವಾರ ನಾಮಪಾತ್ರ ಸಲ್ಲಿಸಲಾಗುವುದು.‌ ಈ ಬಾರಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.

ಈ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬರಲು ಕಾರಣ ಯಾಚಾತುರ್ಯವಾದ ನಿರ್ಧಾರಗಳು. ಬಿಜೆಪಿ ಸರ್ಕಾರ ಸಮರ್ಥವಾದಂತಹ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಗೆಲುವಿನ ಮನದಂಡ ಇರುವವರಿಗೆ ಟಿಕೆಟ್ ಘೋಷಣೆ ಮಾಡುತ್ತಿದೆ. ಅವರ ರಾಜಕೀಯ ನಿರ್ಧಾರವನ್ನು ನಾವು ಮೆಚ್ಚುತ್ತೇವೆ. ಆದರೆ ರಾಷ್ಟ್ರೀಯ ಪಕ್ಷವಾದಂತ ಕಾಂಗ್ರೆಸ್ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ. ಇದು ಎಲ್ಲೋ ಒಂದು ರೀತಿ ಶವಪೆಟ್ಟಿಗೆಗೆ ಒಳ್ಳೆ ಹೊಡೆದಂತೆ ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*