Breaking News

ಬಿಜೆಪಿ ಸೇರ್ಪಡೆಯಾದ ಕಾಗೋಡು ಪುತ್ರಿ.. “ಎದೆಗೆ ಚೂರಿ ಹಾಕಿದಾಗೆ ಆಗಿದೆ ” ಎಂದ ತಂದೆ.

Cnewstv / 12.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬಿಜೆಪಿ ಸೇರ್ಪಡೆಯಾದ ಕಾಗೋಡು ಪುತ್ರಿ.. “ಎದೆಗೆ ಚೂರಿ ಹಾಕಿದಾಗೆ ಆಗಿದೆ ” ಎಂದ ತಂದೆ.

ಶಿವಮೊಗ್ಗ : ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಭಾರಿ ಬದಲಾವಣೆಯಾಗುತ್ತಿದೆ. ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪನವರ ಹಿರಿಯ ಪುತ್ರಿ ರಾಜ ನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಮತ್ತೊಂದು ಹೊಸ ಅಲೆಯನ್ನ ಎಬ್ಬಿಸಿದೆ.

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಮ್ಮುಖದಲ್ಲಿ ರಾಜನಂದಿನಿ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.

ರಾಜನಂದಿನಿಯವರು ಸಾಗರ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು ಆದರೆ ಅವರಿಗೆ ಟಿಕೆಟ್ ದೊರೆಯಲಿಲ್ಲ ಬೇಲೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ದೊರೆತಿದೆ. ತಂದೆ ಕಾಗೋಡು ತಿಮ್ಮಪ್ಪನವರು ಗೋಪಾಲಕೃಷ್ಣರ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಇತ್ತ ರಾಜನಂದಿನಿಯವರು ಬಿಜೆಪಿ ಶಾಸಕ ಹಾಲಪ್ಪನವರ ಸಮ್ಮುಖದಲ್ಲಿಯೇ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*