Cnewstv / 11.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮತ್ತೊಮ್ಮೆ ಕುತೂಹಲ ಮೂಡಿಸಿರುವ ನಾಳೆಯ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ..
ಶಿವಮೊಗ್ಗ : ನಾಳೆ ನಡೆಯಲಿರುವ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿಯೂ ಬಾರಿ ಕುತೂಹಲವನ್ನು ಮೂಡಿಸಿದೆ.
ವಿಧಾನಸಭಾ ಚುನಾವಣೆಯ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ಮಂಜುನಾಥ್ ರವರ ನಾಳೆ ನೂತನ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಂಡಿದ್ದಾರೆ. ಕಳೆದ ಬಾರಿಯ ಪತ್ರಿಕಾಗೋಷ್ಠಿಯೂ ಬಾರಿ ಸಂಚಲನವನ್ನು ಮೂಡಿಸಿತ್ತು ಈ ಬಾರಿಯಾ ಪತ್ರಿಕಾಗೋಷ್ಠಿಯೂ ಕೂಡ ಬಾರಿ ಕುತೂಹಲವನ್ನು ಮೂಡಿಸಿದೆ.
ಈಗಾಗಲೇ ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಆದರೆ ಶಿವಮೊಗ್ಗ ನಗರದ ಅಭ್ಯರ್ಥಿಯನ್ನ ಇನ್ನು ಕೂಡ ಕಾಯ್ದಿರಿಸಲಾಗಿದೆ. ಅಲ್ಲದೆ ಕೆ ಎಸ್ ಈಶ್ವರಪ್ಪನವರೇ ಅಭ್ಯರ್ಥಿ ಎಂದು ಈಗಾಗಲೇ ಹೇಳಲಾಗುತ್ತಿತ್ತು ಆದರೆ ಅವರು ನಿನ್ನೆ ಸಂಜೆ ಚುನಾವಣೆಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.
ಕಳೆದ ಪತ್ರಿಕಾಗೋಷ್ಠಿಯಲ್ಲಿ ಆಯನೂರು ಮಂಜುನಾಥ್ ರವರು ಈಶ್ವರಪ್ಪನವರಿಗೆ ಹಾಗೂ ಆತನ ಪುತ್ರರಿಗೆ ನೇರ ಸವಾಲ್ ಹಾಕಿದ್ದರು. ಹಾಗೂ ಈ ಬಾರಿ ಚುನಾವಣೆಗೆ ನಿಲ್ಲುವುದು ನಿಶ್ಚಿತ. ಇನ್ನು ಎರಡು ಮೂರು ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಕೆ ಎಸ್ ಈಶ್ವರಪ್ಪನವರು ರಾಜೀನಾಮೆ ನೀಡಿದ್ದು ಹಾಗೂ ಶಿವಮೊಗ್ಗ ನಗರದ ಅಭ್ಯರ್ಥಿ ಇನ್ನೂ ಕೂಡ ಘೋಷಣೆ ಮಾಡದೇ ಕಾಯ್ದಿರಿಸಿದ್ದು ಇದೆಲ್ಲದರ ನಡುವೆ ಆಯನೂರು ಮಂಜುನಾಥ್ ರವರ ಪತ್ರಿಕಾಗೋಷ್ಠಿಯು ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv