Cnewstv / 10.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮತದಾನ ಜಾಗೃತಿ ಬಗ್ಗೆ ಸ್ಕೇಟಿಂಗ್ ಜಾಥಾ
ಶಿವಮೊಗ್ಗ : ಪತ್ರಿಕಾ ಸಂಪಾದಕರ ಸಂಘ, ಮಹಾನಗರ ಪಾಲಿಕೆ, ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆವರಣದಿಂದ ಹಮ್ಮಿಕೊಳ್ಳಲಾಗಿತ್ತು.
ಸ್ಕೇಟಿಂಗ್ ಜಾಥಾ ಮಹಾನಗರ ಪಾಲಿಕೆ ಆವರಣದಿಂದ ಆರಂಭವಾಗಿ, ವೀರಭದ್ರೇಶ್ವರ ಟಾಕೀಸ್ ರಸ್ತೆ, ಎಎ ಸರ್ಕಲ್, ಬಸ್‌ಸ್ಟ್ಯಾಂಡ್, ಕುವೆಂಪು ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಮಹಾವೀರ ವೃತ್ತ, ಗೋಪಿ ವೃತ್ತದ ಮೂಲಕ ಮಹಾನಗರ ಪಾಲಿಕೆ ತಲುಪಿತು.
ಶ್ರೀನಿಧಿ ಸಂಸ್ಥೆಯ ಟಿ. ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್ ಗೋಪಿನಾಥ್, ಜಿ. ವಿಜಯಕುಮಾರ್ ಸೇರಿದಂತೆ ಹಲವರು ಮತದಾನದ ಜಾಗೃತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷ ಶಿ.ಜು. ಪಾಷಾ, ಸಂಪಾದಕರ ಸಂಘದ ಅಧ್ಯಕ್ಷ ಜಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸ್ವಾಮಿ, ಖಜಾಂಚಿ ರಘುರಾಜ್, ಪದಾಧಿಕಾರಿಗಳಾದ ಜಿ.ಪದ್ಮನಾಭ್, ಹಾಲೇಶ್, ಕೃಷ್ಣಬನಾರಿ, ಸಹ್ಯಾದ್ರಿ ಮಂಜುನಾಥ್, ಕಣ್ಣಪ್ಪ, ನಾಗೇಶ್ ನಾಯ್ಕ, ಆನಂದ್, ಪಿ. ಆಕಾಶ್, ಭರತೇಶ್, ನಾಗರಾಜ ಕಲ್ಲುಕೊಪ್ಪ, ಕನ್ನಡ ಪ್ರಭ ವರದಿಗಾರ ಗೋಪಾಲ ಯಡಗೆರೆ, ಸ್ಕೇಟಿಂಗ್ ಪ್ರಧಾನ ಕಾರ್ಯದರ್ಶಿ, ರವಿಕುಮಾರ್ ಸ್ವೀಪ್ ಸಮಿತಿಯ ನವೀದ್ ಅಹಮದ್ ಪರ್ವೀಜ್, ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv