Breaking News

ಐವರು ಯುವಕರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ..

Cnewstv / 07.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಐವರು ಯುವಕರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ..

ಶಿವಮೊಗ್ಗ: ಇಬ್ಬರಿಗೆ ಚೂರಿಯಿಂದ ಇರಿದು ಮತ್ತು ನಾಲ್ವರ ಮೇಲೆ ಹಲ್ಲೆ ಮಾಡಿದ್ದ ಐವರು ಯುವಕರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದಾರೆ.

ಶಿವಮೊಗ್ಗದ ಕೊರಮಕೇರಿ ನಿವಾಸಿಗಳಾದ ವಿಜಯಕುಮಾರ್(26) ಪ್ರವೀಣ್(20), ನವೀನ್ (24), ಚೇತನ್ (24), ಸಂತೋಷ್(33) ಶಿಕ್ಷೆಗೊಳಗಾದವರು. ಇವರಿಗೆ 65 ಸಾವಿರ ರೂ ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

2018ರ ಜ.20ರಂದು ಶಿಕ್ಷೆಗೊಳಗಾದ ಯುವಕರು ಗೋವಿಂದಾಪುರ ಗ್ರಾಮದ ನಿವಾಸಿಗಳಾದ ನವೀನ್, ನಿತಿನ್, ಗೋಪಿ, ಲೋಹಿತ್, ಪ್ರಜ್ವಲ್, ರಾಜು ಅವರ ಮೇಲೆ ಹಳೆ ವೈಷಮ್ಯದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನವೀನ್ ಮತ್ತು ನಿತಿನ್ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಉಳಿದವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದರು. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*