Cnewstv / 07.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತಂದೆಯ ಸಾವಿನ ನೂವಿನಲ್ಲಿಯೂ ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿನಿ.. ಆನ್ ಲೈನ್ ನಲ್ಲಿ ಅಂತಿಮ ಸಂಸ್ಕಾರ.
ಹೊಸನಗರ : ಇಲ್ಲಿನ ಗೇರುಪುರ, ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ 10ನೇ ತರಗತಿ ವಿಧ್ಯಾರ್ಥಿನಿ ಆರ್ಶಿಯಾ ಮನಿಯರ್ ಅವರು ತಂದೆಯ ಸಾವಿನ ನೂವಿನಲ್ಲಿಯೂ ಗುರುವಾರ ವಾರ್ಷಿಕ ಪರೀಕ್ಷೆ ಇಂಗ್ಲಿಷ್ ಭಾಷೆಯನ್ನು ಬರೆದರು.
ವಿಧ್ಯಾರ್ಥಿನಿಯ ತಂದೆ ಅಬಿದ್ ಭಾಷಾ ಮನಿಯರ್ ಅವರು
ಕೊಪ್ಪಳದ ನಿವಾಸದಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೃದಯಾಘಾತದಿಂದ ಸಾವನಪ್ಪಿದ್ದರು. ವಿದ್ಯಾರ್ಥಿನಿಯ ಪೋಷಕರು ತಂದೆಯ ಸಾವಿನ ಸುದ್ಧಿಯನ್ನು ವಸತಿ ಶಾಲೆಯ ಪ್ರಾಂಶುಪಾಲರ ಗಮನಕ್ಕೆ ತಂದು, ವಿಧ್ಯಾರ್ಥಿನಿಗೆ ತಂದೆಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಕೋರುತ್ತಾರೆ.
ಕೂಡಲೆ ಸ್ಪಂದಿಸಿದ ವಸತಿ ಶಾಲೆಯ ಆಡಳಿತ ಮಂಡಳಿ, ಗುರುವಾರ ಬೆಳಿಗ್ಗೆ 10:30 ಕ್ಕೆ ವಿಧ್ಯಾರ್ಥಿನಿಗೆ 10 ನೇ ತರಗತಿಯ ಇಂಗ್ಲಿಷ್ ಭಾಷಾ ವಾರ್ಷಿಕ ಪರೀಕ್ಷೆ ಇದೆ ಎಂದು ಪೋಷಕರಿಗೆ ತಿಳಿಸುತ್ತಾರೆ. ಆದರೆ ತಂದೆಯ ಅಂತಿಮ ದರ್ಶನ ಪಡೆಯುವುದು ವಿಧ್ಯಾರ್ಥಿನಿಯ ಆಧ್ಯ ಕರ್ತವ್ಯ ಎಂದು ಮನಗಂಡು, ತಕ್ಷಣ ಪೋಷಕರಿಗೆ ವಿಧ್ಯಾರ್ಥಿಯನ್ನು ಕೊಪ್ಪಳಕ್ಕೆ ಕರೆತರುವುದಾಗಿ ತಿಳಿಸುತ್ತಾರೆ.
ವಿಧ್ಯಾರ್ಥಿಯನ್ನು ಖಾಸಗಿ ವಾಹನದಲ್ಲಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಎಚ್. ಹೆಬ್ಬಳಗೆರೆ, ನಿಲಯಪಾಲಕ ಆರ್. ಶಾಂತಾನಾಯ್ಕ್ ಹಾಗೂ ಮಹಿಳಾ ಸಿಬ್ಬಂದಿ ಸುನೀತಾ ಅವರು ರಾತ್ರಿ 10:30ರ ಸುಮಾರಿಗೆ ಹೊಸನಗರದಿಂದ ಹೊರಟು, ಬೆಳಿಗ್ಗೆ 4 ಗಂಟೆ ಸುಮಾರಿಗೆ 300 ಕಿ.ಮೀ ದೂರದ ಕೊಪ್ಪಳದ ವಿಧ್ಯಾರ್ಥಿನಿ ನಿವಾಸಕ್ಕೆ ತೆರಳಿ, ವಿಧ್ಯಾರ್ಥಿನಿಗೆ ತಂದೆಯ ಅಂತಿಮ ದರ್ಶನಕ್ಕೆ ಸಹಕರಿಸಿದರು.
ವಿಧ್ಯಾರ್ಥಿನಿಯ ತಂದೆಯ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಬೆಳಿಗ್ಗೆ 5 ಗಂಟೆಗೆ ಕೊಪ್ಪಳದಿಂದ ಹೊರಟು ಬೆಳಿಗ್ಗೆ 10:30 ಕ್ಕೆ ಹೊಸನಗರ ತಾಲ್ಲೂಕು ಹೋಲಿ ರೆಡಿಮರ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ವಿಧ್ಯಾರ್ಥಿನಿಯನ್ನು ಕರೆತರಲಾಗಿದೆ. ವಿಧ್ಯಾರ್ಥಿನಿಗೆ ವಸತಿ ಶಾಲೆಯ ಆಡಳಿತ ಮಂಡಳಿ ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿಯರು ಧೈರ್ಯ ತುಂಬಿ ಪರೀಕ್ಷೆ ಬರೆಯಲು ಸಹಕರಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments