Breaking News

ನಗರದಲ್ಲಿ ಸ್ಥಾಪಿಸಲಾಗಿದೆ ವಿಕಲಚೇತನರು ನಿರ್ವಹಿಸುವ ಒಂದು ಮತಗಟ್ಟೆ.

Cnewstv / 06.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಗರದಲ್ಲಿ ಸ್ಥಾಪಿಸಲಾಗಿದೆ ವಿಕಲಚೇತನರು ನಿರ್ವಹಿಸುವ ಒಂದು ಮತಗಟ್ಟೆ.

ಅರ್ಹ ಮತದಾರರೆಲ್ಲ ಮತದಾನ ಮಾಡುವಂತೆ ಡಿಸಿ ಮನವಿ.

ಶಿವಮೊಗ್ಗ : ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ವಿಕಲಚೇತನರು ತಮ್ಮ ತಮ್ಮ ಬೂತ್‍ಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರೇರೇಪಿಸಿದರು.

ಮಿಳಘಟ್ಟದಲ್ಲಿ ವಿಕಲಚೇತನರು ನಿರ್ವಹಿಸುವ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. 23 ಜನ ವಿಕಲಚೇತನರು ಇಲ್ಲಿ ನಿರ್ವಹಣೆ ಮಾಡುವರು ಎಂದು ತಿಳಿಸಿದ ಅವರು ಎಲ್ಲ ಅರ್ಹ ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಿಕಲಚೇತನರು ತಮ್ಮ ತ್ರಿಚಕ್ರ ವಾಹನಗಳಲ್ಲಿ ಇಂದು ಬೆಳಿಗ್ಗೆ ಮಹಾನಗರಪಾಲಿಕೆ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*