Cnewstv / 04.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೆ ಎಸ್ ಈಶ್ವರಪ್ಪನವರನ್ನು ಕುರಿತಂತೆ ಅನೇಕ ಸತ್ಯಗಳನ್ನು ಬಿಚ್ಚಿಟ್ಟಿ ಆಯನೂರು ಮಂಜುನಾಥ್ ರವರಿಗೆ ಅಭಿನಂದನೆಗಳು..
ಶಿವಮೊಗ್ಗ : ಕೆ ಎಸ್ ಈಶ್ವರಪ್ಪನವರನ್ನು ಕುರಿತಂತೆ ಅನೇಕ ಸತ್ಯಗಳನ್ನು ಬಿಚ್ಚಿಟ್ಟಿ ಆಯನೂರು ಮಂಜುನಾಥ್ ರವರಿಗೆ ಅಭಿನಂದನೆಗಳು ಎಂದು ಮಾಜಿ ಶಾಸಕ ಹಾಗೂ ಅಭ್ಯರ್ಥಿ ಆಕಾಂಕ್ಷಿ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಈಶ್ವರಪ್ಪನವರು ಅಶಾಂತಿ ಕೋಮುಗಲಬೆ ಸೃಷ್ಟಿಸಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಪಕ್ಷದವರೇ ಆದ ಆಯನೂರು ಮಂಜುನಾಥ್ ಅವರ ಸ್ವಭಾವ ನಡೆಯನ್ನು ಗಮನಿಸಿಯೇ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಗಲಾಟೆ, ಗೊಂದಲ ಆಗಬಹುದು. ಮಸೀದಿ ಮಂದಿರಗಳು ಮಲಿನವಾಗಬಹುದು ಎಂಬ ದಟ್ಟ ಸೂಚನೆ ಕೊಟ್ಟಿದ್ದಾರೆ.
ಆಯನೂರು ಮಂಜುನಾಥ್ ರವರ ಗಂಭೀರ ಹೇಳಿಕೆಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳು ಗಮನಿಸಬೇಕಾಗಿದೆ ಎಚ್ಚರ ವಹಿಸಬೇಕಾಗಿದೆ. ರಾಜ್ಯ ಚುನಾವಣಾ ಅಧಿಕಾರಿಗಳು ಕೂಡ ಶಿವಮೊಗ್ಗದ ಮೇಲೆ ಹದ್ದಿನಕಣ್ಣು ಇಡಬೇಕಾಗಿದೆ ಎಂದರು.
ಇದರ ಜೊತೆಗೆ ಶಿವಮೊಗ್ಗದಲ್ಲಿ ಈಗಾಗಲೇ ಹಣದ ಹೊಳೆ ಹರಿಯುತ್ತಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಸೀರೆಗಳು ಸಿಕ್ಕಿವೆ. ನಗದು ಸಿಕ್ಕಿದೆ. ವಾರ್ಡ್‍ಗಳಲ್ಲಿ ಹಣವನ್ನು ಈಗಾಗಲೇ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿಯ ಬಗ್ಗೆ ಸುಳಿವನ್ನು ಕೂಡ ಆಯನೂರು ಮಂಜುನಾಥ್ ನೀಡಿದ್ದಾರೆ. ಈ ವಿಷಯವನ್ನು ಕೂಡ ಚುನಾವಣಾ ಅಧಿಕಾರಿಗಳ ಗಮನಿಸಬೇಕು ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv