Cnewstv / 02.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನೀತಿ ಸಂಹಿತೆ ಉಲ್ಲಂಘನೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು.
ಶಿವಮೊಗ್ಗ : ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ರಾಜಕೀಯ ಸಭೆ ಮತ್ತು ಚಟುವಟಿಕೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.
ಇಂದು ಬೆಳಗ್ಗೆ ಸೋಮಿನಕೊಪ್ಪ ಗ್ರಾಮದ ಬೋವಿ ಕಾಲೋನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಸ್ಥಳೀಯರು ಗುಂಪಾಗಿ ಸಭೆ ನಡೆಸಿರುವ ಫೋಟೋ ಮೊಬೈಲ್ನಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಫೈಯಿಂಗ್ ಸ್ಕ್ವಾಡ್ – 1 ಬಿ ತಂಡದ ಅಧಿಕಾರಿಗಳು ವಿಧಾನ ಸಭಾ ಕ್ಷೇತ್ರದವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ತಂಡದ ಸದಸ್ಯರು ತನಿಖೆಯನ್ನು ನಡೆಸಿದ್ದು, ಸೋಮಿನಕೊಪ್ಪ ಗ್ರಾಮದ ಬೋವಿ ಕಾಲೋನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಾತ್ರೆ ಬಗ್ಗೆ ಚರ್ಚಿಸುತ್ತಿದ್ದಾಗ ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗನಾಥ್, ಗಿರೀಶ್ ಲೋಕೇಶ್ ಮತ್ತು ಮೋಹನ್ ರವರು ನೆರೆದಿದ್ದ ಸಾರ್ವಜನಿಕರಿಗೆ ಬಿತ್ತಿ ಪತ್ರಗಳನ್ನು ಹಂಚಿಕೆ ಮಾಡಿರುವುದಾಗಿ ತಿಳಿದು ಬಂದಿದೆ.
ದೇವಸ್ಥಾನವು ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದ್ದರೂ ಸಹ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯದೆ ರಾಜಕೀಯ ಸಭೆ ಮತ್ತು ಚಟುವಟಿಕೆಗಳನ್ನ ಮಾಡಿ ಧಾರ್ಮಿಕ ಸ್ಥಳವನ್ನು ದುರುಪಯೋಗ ಮಾಡಿಕೊಂಡು ಪಕ್ಷದ ಪರವಾಗಿ ಪ್ರಚಾರ ಮಾಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗನಾಥ್ ಕೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್ ಪಿ ಗಿರೀಶ್, ಲೋಕೇಶ್ ಮತ್ತು ಮೋಹನ್ ರವರ ವಿರುದ್ಧ ಗುನ್ನೆ ಸಂಖ್ಯೆ 0063/2023 Religios institution Act & Representation of peoples Act ಅಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv