Cnewstv / 02.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಗುವಿನ ಮೃತದೇಹವನ್ನು ಕಚ್ಚಿಕೊಂಡು ಆಸ್ಪತ್ರೆ ಆವರಣ ತಿರುಗಾಡಿದ ನಾಯಿ.
ಶಿವಮೊಗ್ಗ : ನಾಯಿಯೊಂದು ಮಗುವಿನ ಮೃತ ದೇಹವನ್ನು ಕಚ್ಚಿಕೊಂಡು ಆಸ್ಪತ್ರೆ ಅವರಣವನ್ನು ತಿರುಗಾಡಿದ ಘಟನೆ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯಲ್ಲಿ ನಡೆದಿದೆ.
ಮೆಗ್ಗನ್ ಆಸ್ಪತ್ರೆಯ ಹೆರಿಗೆ ವಾರ್ಡಿನ ಹತ್ತಿರ ಇಂದು ಬೆಳಿಗ್ಗೆ ನವಜಾತ ಶಿಶುವನ್ನು ನಾಯಿ ಕಚ್ಚಿಕೊಂಡು ಓಡಾಡುತ್ತಿದ್ದನ್ನು ಸಾರ್ವಜನಿಕರು ಗಮನಿಸಿ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ನಾಯಿಯನ್ನು ಓಡಿಸಿ ಶಿಶುವನ್ನು ಪರೀಕ್ಷಿಸಿದಾಗ ಮಗು ಮೃತಪಟ್ಟಿರುವುದು ತಿಳಿದಿದೆ.
ಇನ್ನು ಈ ಮಗು ಯಾರಿಗೆ ಸೇರಿದ್ದು ಅವರ ತಂದೆ ತಾಯಿ ಯಾರು ಎಂಬುದರ ಬಗ್ಗೆ ನಿಖರ ಮಾಹಿತಿಗಳಿಲ್ಲ ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv