Cnewstv / 31.03.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ ಜಿಲ್ಲಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ ಮೇಲೆ ಕ್ರಮಕೈಗೊಳ್ಳಿ..
ಶಿವಮೊಗ್ಗ : ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದರೂ ಸಹ ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ ಹಾಗೂ ಕಾರ್ಯನಿರ್ವಾಹಕ ಮಂಡಳಿಯ ಸಭೆ ನಡೆದಿದ್ದು, ಬ್ಯಾಂಕ್‌ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಇಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಗಳಿಗೆ ಮನವಿ ಸಲ್ಲಿಸಿದರು.
ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ವಿವಿಧ ರಾಜಕೀಯ ಪಕ್ಷಗಳ ಸಕ್ರಿಯ ಕಾರ್ಯರ್ತರಾಗಿರುತ್ತಾರೆ. ಹಾಗೂ ಅಧ್ಯಕ್ಷರು ಆಡಳಿತ ಪಕ್ಷದ ಸಕ್ರಿಯ ಕಾರ್ಯರ್ತರಾಗಿದ್ದಾರೆ. ಈ ಸಭೆಗಳಲ್ಲಿ ವಿವಿಧ ಹೊಸ ಸಹಕಾರ ಸಂಘಗಳ ಸದಸ್ಯತ್ವ ನೀಡುವುದು , ಹೊಸದಾಗಿ ಸಾಲ ನೀಡುವುದು, ಆಯ್ದ ಸಂಘಗಳಿಗೆ ಹೆಚ್ಚುವರಿ ಸಾಲ ನೀಡುವುದು ಮಾಡಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ತಮಗೆ ಬೇಕಾದವರಿಗೆ ಹೆಚ್ಚುವರಿ ಸಾಲವನ್ನು ರಾಜಕೀಯ ಲಾಭಕ್ಕಾಗಿ ನೀಡುತ್ತಿರುವುದು ಕಂಡುಬರುತ್ತಿದೆ. ಸಾರ್ವಜನಿಕ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ತಮ್ಮ ರಾಜಕೀಯ ಲಾಭಕ್ಕಾಗಿ ಬ್ಯಾಂಕನ್ನು, ತಮ್ಮ ಅಧಿಕಾರವನ್ನು ಉಪಯೋಗಿಸುತ್ತಿದ್ದಾರೆ. ಬ್ಯಾಂಕ್‌ನ ಅಧ್ಯಕ್ಷರು, ಬ್ಯಾಂಕಿನಿಂದ ನೀಡಿದ ವಾಹನವನ್ನು ಉಪಯೋಗಿಸುತ್ತಿರುವುದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಬ್ಯಾಂಕಿನಿಂದ ರೈತರಿಗೆ ತೊಂದರೆಯಾಗದಂತೆ ಈಗಾಗಲೇ ನೀಡಿದ ಸಾಲದ ನವೀಕರಣವನ್ನು ಮಾತ್ರ ಮಾಡುವಂತೆ ಆದೇಶಿಸಬೇಕು. ಮತ್ತು ಹಿಂದಿನ ಆಡಳಿತ ಮಂಡಳಿಯ ಮತ್ತು ಕಾರ್ಯನಿರ್ವಾಹಕ ಸಮಿತಿಯ ಸಭೆಯ ನಡವಳಿಕೆಯ ದೃಢೀಕೃತ ನಕಲನ್ನು ಪಡೆದು ಸದರಿ ಸಭೆಯ ನಡಾವಳಿಯಲ್ಲಿ ಹೆಚ್ಚುವರಿಯಾಗಿ ವಿಷಯಗಳನ್ನು ಸೇರಿಸದಂತೆ ತಡೆಹಿಡಿಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್, ಸದಸ್ಯ ವೈಹೆಚ್. ನಾಗರಾಜ್, ಸಂಯೋಜಕ ಆರ್. ಮೋಹನ್, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ. ಗಂಗಾಧರಪ್ಪ, ಜಿಲ್ಲಾ ಕಿಸಾನ್ ಸೆಲ್ ಕಾರ್ಯಾಧ್ಯಕ್ಷ ತಕ್ರಾ ನಾಯ್ಕ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಸಿ. ಸಿದ್ದಪ್ಪ ಹಾಜರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv