Cnewstv / 28.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿಕಾರಿಪುರ – ಶಿವಮೊಗ್ಗ ರಸ್ತೆ ತಡೆ. ಸಾಲುಗಟ್ಟಿ ನಿಂತಿರುವ ವಾಹನಗಳು.
ಶಿವಮೊಗ್ಗ : ಮೀಸಲಾತಿ ಕಡಿತ ಖಂಡಿತ ನೆನ್ನೆ ಶಿಕಾರಿಪುರದಲ್ಲಿ ನಡೆಯುತ್ತಿದ್ದ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಇಂದು ಬೆಳಗ್ಗೆ ಶಿವಮೊಗ್ಗ – ಶಿಕಾರಿಪುರ ರಸ್ತೆ ಮಧ್ಯೆ ಗರಿ ಹಾಗೂ ಟೈಯಾರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ.

ಮೀಸಲಾತಿ ಅಸಮಾನದ ಕಿಚ್ಚು ಶಿವಮೊಗ್ಗದ ಗ್ರಾಮಕ್ಕೂ ಹಬ್ಬಿದೆ. ಶಿವಮೊಗ್ಗದ ಕುಂಚೇನಹಳ್ಳಿ ಗ್ರಾಮದ ಗ್ರಾಮಸ್ಥರು ಶಿಕಾರಿಪುರ ಶಿವಮೊಗ್ಗ ರಸ್ತೆ ಮಧ್ಯದಲ್ಲಿ ತೆಂಗಿನ ಗರಿ ಹಾಗೂ ಟೈಯರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿಡೀರ್ ಪ್ರತಿಭಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಹಾಗೂ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ಸಾಲುಗಟ್ಟಿ ರಸ್ತೆ ಮಧ್ಯ ನಿಂತಿವೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv