Breaking News

“SAVE VISL” ಪ್ರಧಾನಿಗೆ ರಕ್ತದಲ್ಲೇ ಪತ್ರ ಬರೆದ ಕಾರ್ಮಿಕರು.

Cnewstv / 27.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

“SAVE VISL” ಎಂದು ಪ್ರಧಾನಿಗೆ ರಕ್ತದಲ್ಲೇ ಪತ್ರ ಬರೆದ ಕಾರ್ಮಿಕರು.

ಶಿವಮೊಗ್ಗ : ಭದ್ರಾವತಿಯ ವಿಐಎಸ್ಎಲ್ ಉಳಿವಿಗಾಗಿ ಕಾರ್ಮಿಕರು ಪ್ರಧಾನಿಗೆ ತಮ್ಮ ರಕ್ತದಲ್ಲೇ ಪತ್ರ ಬರೆದಿದ್ದಾರೆ.

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚಲು ಅದೇಶ ನೀಡಿದೆ. ಈ ಪ್ರಸ್ತಾಪ ಕೈಬಿಡಲು ಅಗ್ರಹಿಸಿ ವಿಐಎಸ್ಎಲ್ ನೌಕರರು ಹಾಗೂ ಕಾರ್ಮಿಕರು ಕಳೆದ 68 ದಿನದಿಂದ ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಕಾರ್ಖಾನೆ ಉಳಿವಿಗಾಗಿ ಕಾರ್ಮಿಕರು ರಕ್ತಪತ್ರ ಚಳುವಳಿ ಆರಂಭ ಮಾಡಿದ್ದಾರೆ. ಸಿರಿಂಜ್ ಮೂಲಕ ರಕ್ತ ತೆಗೆದು, ಬರೆದು ಪೋಸ್ಟಲ್ ಕಾರ್ಡ್ ಪ್ರಧಾನಿಗೆ ರವಾನೆ ಮಾಡಲು ಮುಂದಾಗಿದ್ದಾರೆ.

ಸರ್ ಎಂ. ವಿಶ್ವೇಶ್ವರಯ್ಯ ಅವರ ಶ್ರಮದಿಂದ ಆರಂಭಗೊಂಡಿದ್ದ VISL ಕಾರ್ಖಾನೆಯಲ್ಲಿ 70- 80ರ ದಶಕದಲ್ಲಿ 12 ಸಾವಿರಕ್ಕೂ ಅಧಿಕ ಖಾಯಂ ಹಾಗೂ 4 ಸಾವಿರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿದ್ದರು. ನಂತರ ಕಾರ್ಖಾನೆ ನಷ್ಟದ ಸುಳಿಗೆ ಸಿಕ್ಕ ಬಳಿಕ ಹಂತ ಹಂತವಾಗಿ ಕಾರ್ಮಿಕರ ಸಂಖ್ಯೆ ಇಳಿಕೆಯಾಗಿತ್ತು.ಪ್ರಸ್ತುತ ಕಾರ್ಖಾನೆಯಲ್ಲಿ 211 ಖಾಯಂ ಮತ್ತು 1340 ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*