Breaking News

ಚರ್ಚೆಗೆ ಗ್ರಾಸವಾದ ಆಯನೂರು ಮಂಜುನಾಥ್ ಫ್ಲೆಕ್ಸ್..

Cnewstv / 21.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಚರ್ಚೆಗೆ ಗ್ರಾಸವಾದ ಆಯನೂರಯ ಮಂಜುನಾಥ್ ಫ್ಲೆಕ್ಸ್..

ಶಿವಮೊಗ್ಗ : ವಿಧಾನಸಭಾ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಎಲ್ಲಾ ಪಕ್ಷಗಳು ಬಾರಿ ಬಹುಮತ ಪಡೆಯುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದರೆ, ಅಭ್ಯರ್ಥಿಗಳು ಪಕ್ಷದಿಂದ ಬಿ ಫಾಮ್ ಪಡೆಯಲು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯ ಆಕಾಂಕ್ಷಿಯಾಗಿರುವ ಅಯನೂರು ಮಂಜುನಾಥ್ ರವರು ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ ಹಾಕಿರುವ ಫ್ಲಕ್ಸ್ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಹರಕು ಬಾಯಿಗಳಿಗೆ ಹೋಲಿಗೆ ಬೀಳಲಿ
ಮುರಿದ ಮನಸ್ಸುಗಳ ಬೆಸುಗೆಯಾಗಲಿ
ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ
ಈ ಬಾರಿ ಅಯನೂರು ಮಂಜುನಾಥ್.

ಈ ಸಾಲುಗಳನ್ನು ಹಾಲಿ ಶಾಸಕ ಕೆ ಎಸ್ ಈಶ್ವರಪ್ಪನವರಿಗೆ ಟಾರ್ಗೆಟ್ ಮಾಡಿ ಹೇಳಲಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ಅಯನೂ ಮಂಜುನಾಥ್ ಎಂಬ ಫ್ಲೆಕ್ಸ್ ಹಿಂದೆಯೇ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಈ ಸಾಲುಗಳು ಮತ್ತಷ್ಟು ಕುತೂಹಲವನ್ನ ಕೆರಳಿಸಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*