Breaking News

ಮತದಾನದ ಜಾಗೃತಿ ಕಾರ್ಯಕ್ರಮ, ಸೈಕಲ್ ಏರಿದ ಎಸ್ ಪಿ, ಡಿ ಸಿ.

Cnewstv / 19.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮತದಾನದ ಜಾಗೃತಿ ಕಾರ್ಯಕ್ರಮ, ಸೈಕಲ್ ಏರಿದ ಎಸ್ ಪಿ, ಡಿ ಸಿ.

ಶಿವಮೊಗ್ಗ : ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇಂದು ಬೆಳಗ್ಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಸೈಕಲ್ ಜಾಥಾವನ್ನು ಜಿಲ್ಲಾಧಿಕಾರಿ ಡಾ ಸೇಲ್ವಮಣಿ ಆರ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ವತಃ ಸೈಕಲ್ ಚಲಾಯಿಸುವ ಮೂಲಕ‌ ಚಾಲನೆ ನೀಡಿದರು.

ಸೈಕಲ್ ಜಾಥಾವು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಾರಂಭವಾಗಿ – ಅಶೋಕ ಸರ್ಕಲ್ – ನ್ಯೂ ಮಂಡ್ಲಿ – ಗೋಪಾಳ – ಅಳ್ಕೊಳ – ವಿನೋಬನಗರ ಪೊಲೀಸ್ ಚೌಕಿ – ಸಂಗೊಳ್ಳಿ ರಾಯಣ್ಣ ಸರ್ಕಲ್ – ಶಂಕರ್ ಮಠ – ಕರ್ನಾಟಕ ಸಂಘ ವೃತ್ತ – ಡಿ.ವಿ.ಸ್ ಸರ್ಕಲ್ – ಮಹಾವೀರ ಸರ್ಕಲ್ – ಎ ಎ ಸರ್ಕಲ್ – ಅಶೋಕ ಸರ್ಕಲ್ ಮೂಲಕ ಸಾಗಿ ಬಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನ ದಲ್ಲಿ ಮುಕ್ತಾಯವಾಗಿರುತ್ತದೆ.

ಸೈಕಲ್ ಜಾಥಾದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ
ಅನಿಲ್ ಕುಮಾರ್ ಭೂಮಾರೆಡ್ಡಿ, ಉಪಾಧೀಕ್ಷಕರು ಬಾಲರಾಜ್, ಪ್ರಭು ಡಿಟಿ, ಶ್ರೀ ನಿಶಿಮಪ್ಪ ಎನ್ ಹನಕನಹಳ್ಳಿ, ಡಿಎಆರ್ ಘಟಕ, ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಸೇರಿದಂತೆ ಪೊಲೀಸ್ ಸಿಬ್ಬಂಧಿಗಳು ಭಾಗವಹಿಸಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*