Cnewstv / 19.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಿಲಿಂಡರ್ ತುಂಬಿದ ಲಾರಿ ಪಲ್ಟಿ. ತಪ್ಪಿದ ಬಾರಿ ಅನಾಹುತ..
ಶಿವಮೊಗ್ಗ : ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾದ ಘಟನೆ ನೆನ್ನೆ ರಾತ್ರಿ ನಡೆದಿದೆ.
ಶಿವಮೊಗ್ಗ ದಿಂದ ಎನ್ ಅರ್ ಪುರದ ಕಡೆಗೆ ಹೋಗುತ್ತಿದ್ದ ಸಿಲೆಂಡರ್ ತುಂಬಿದ ಲಾರಿ ಒಡ್ಡಿನಕೊಪ್ಪ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಲಾರಿಯಲ್ಲಿದ್ದಂತಹ ಸಿಲೆಂಡರ್ ಗಳು ರಸ್ತೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದರಿಂದ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಭಾಯಿಸಿದರು. ಅದೃಷ್ಟವಷತ್ ಈ ಘಟನೆಯಲ್ಲಿ ಯಾವುದೇ ರೀತಿಯಾದಂತಹ ಅನಾಹುತವಾಗಿಲ್ಲ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv