Cnewstv / 18.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಮಗೆ ಕಾಂಗ್ರೆಸ್ ಲೆಕ್ಕದಲ್ಲೇ ಇಲ್ಲ..
ಶಿವಮೊಗ್ಗ : ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪನವರು ನಮಗೆ ಕಾಂಗ್ರೆಸ್ ಲೆಕ್ಕದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಮಾ. 1 ರಂದು ಆರಂಭಗೊಂಡ ಪಕ್ಷದ ವಿಜಯಸಂಕಲ್ಪ ಯಾತ್ರೆಗೆ ಅಭೂತಪೂರ್ವ ಹಾಗೂ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತಿದೆ. ನಮ್ಮ ತಂಡದ ವಿಜಯ ಸಂಕಲ್ಪ ಯಾತ್ರೆ ಮಾ.೧ರಂದು ಮಲೆಮಹಾದೇಶ್ವರ ಬೆಟ್ಟದಿಂದ ಆರಂಭವಾಗಿದ್ದು, ಈಗಾಗಲೇ 46 ವಿಧಾನ ಸಭಾ ಕ್ಷೇತ್ರದಲ್ಲಿ ಯಾತ್ರೆ ಸಾಗಿದ್ದು ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಯಾತ್ರೆ ಸಂಚರಿಸುತ್ತಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದಲೂ ಯಾತ್ರೆ ಆರಂಭವಾಗಿದ್ದು, ಮಾ 25 ರಂದು ನಾಲ್ಕೂ ಯಾತ್ರೆಗಳು ದಾವಣಗೆರೆ ತಲುಪಲಿದ್ದು, ಅಂದು ಬೃಹತ್ ಸಮಾವೇಶ ನಡೆಯಲಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಸಿದ್ಧತೆಗಳು ಭರದಿಂದ ಸಾಗಿದೆ ಎಂದರು.
ದಾವಣಗೆರೆಯಲ್ಲಿ ಸಿದ್ದರಾಮಯ್ಯೋತ್ಸವ ನಡೆದಿದ್ದು ಅದೇ ಜಿಲ್ಲೆಗೆ ಮೋದಿ ಅವರು ಆಗಮಿಸುತ್ತಿದ್ದಾರೆ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ ಎಸ್ ಈಶ್ವರಪ್ಪನವರು, ನಮಗೆ ಕಾಂಗ್ರೆಸ್ ಲೆಕ್ಕದಲ್ಲಿ ಇಲ್ಲ.. ಮೋದಿ ಮೋದಿ ನೇ.. ಅವರನ್ನು ಬೇರೆಯವರಿಗೆ ಹೋಲಿಸಲು ಸಾಧ್ಯವಿಲ್ಲ. ಮೋದಿಯವರು ವಿಶ್ವ ನಾಯಕ ಎಂದು ಬೇರೆ ಬೇರೆ ರಾಷ್ಟ್ರದವರೇ ಹೇಳುತ್ತಿದ್ದಾರೆ. ನಾವು ಅವರನ್ನ ಬೇರೆಯವರಿಗೆ ಹೋಲಿಸಲು ಸಾಧ್ಯವಿಲ್ಲ..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv