Breaking News

ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲಾ ಪಂಚಾಯತ್. ಮೂರನೇ ಸ್ಥಾನದಲ್ಲಿ ಭದ್ರಾವತಿ ತಾಲ್ಲೂಕು ಪಂಚಾಯತಿ

Cnewstv / 17.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲಾ ಪಂಚಾಯತ್. ಅತ್ಯತ್ತಮ ತಾಲ್ಲೂಕು ಪಂಚಾಯತಿ ಭದ್ರಾವತಿ.

ಶಿವಮೊಗ್ಗ : ಮಹಾತ್ಮ ಗಾಂಧಿಜಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದೆ. ಅತ್ಯುತ್ತಮ ತಾಲೂಕು ಪಂಚಾಯಿತಿ ವಿಭಾಗದಲ್ಲಿ ಭದ್ರಾವತಿ ತಾಲೂಕು ತೃತೀಯ ಬಹುಮಾನವನ್ನು ಪಡೆದಿದೆ.

ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾವನದಿನಗಳ ಸೃಜನೆ, ಕಾಮಗಾರಿ ಮುಕ್ತಾಯ, ಜಿಯೋಟ್ಯಾಗ್‌, ಮಹಿಳೆಯರ ಭಾಗವಹಿಸುವಿಕೆ, ಸಾಮಾಜಿಕ ಲೆಕ್ಕಾ ತಪಾಸಣೆ, ಕಡತ ನಿರ್ವಹಣೆ ಮತ್ತು ಇತರೆ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯತ್ತಮ ತಾಲ್ಲೂಕು ಪಂಚಾಯತಿ ಪುರಸ್ಕಾರದಲ್ಲಿ ತೃತಿಯ ಪುರಸ್ಕಾರ ಭದ್ರಾವತಿ ತಾಲ್ಲೂಕಿಗೆ ಲಭಿಸಿದೆ. ಜಲ ಸಂಜೀವಿನಿ ಪಂಚಾಯಿತ್ ಪುರಸ್ಕಾರ ವಿಭಾಗದಲ್ಲಿ ಸಾಗರದ ಸೈದೂರು ಗ್ರಾಮ ಪಂಚಾಯಿತಿ ಪ್ರಶಸ್ತಿ ಪಡೆದಿದೆ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*