Breaking News

ಜಿಲ್ಲೆಯಲ್ಲಿ ಐದನೇ ವಿದ್ಯುತ್ ಅದಾಲತ್

Cnewstv / 17.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಾಳೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಅದಾಲತ್.

ಶಿವಮೊಗ್ಗ : ದಿನಾಂಕ 18.03.2023 ರಂದು ಬೆಳಗ್ಗೆ 11:00 ಘಂಟೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಐದನೇ ವಿದ್ಯುತ್ ಅದಾಲತ್ ನಡೆಯಲಿದ್ದು, ಜಿಲ್ಲೆಯ ಈ ಕೆಳಕಾಣಿಸಿದ ಹಳ್ಳಿಗಳಲ್ಲಿ ವಿದ್ಯುತ್ ಅದಾಲತ್ ವ್ಯವಸ್ಥೆ ಮಾಡಲಾಗಿದೆ. ಈ ಅದಾಲತ್‍ನಲ್ಲಿ ಮೆಸ್ಕಾಂನ ಹಿರಿಯ ಅಧಿಕಾರಿಗಳು ಭೇಟಿ ನೀಡಲಿರುವರು.

ಶಿವಮೊಗ್ಗ ತಾಲೂಕಿನ- ಬಿ.ಬೀರನಹಳ್ಳಿ,s ಸೇವಾಲಾಲ್ ದೇವಸ್ಥಾನ ಚನ್ನಹಳ್ಳಿ ಗ್ರಾಮ. ತೀರ್ಥಹಳ್ಳಿ ತಾಲೂಕಿನ- ನಾಲೂರು, ಮಂಡಗದ್ದೆ. ಭದ್ರಾವತಿ ತಾಲೂಕಿನ- ಹೊಸಹಳ್ಳಿ, ಮಂಗೋಟೆ. ಸಾಗರ ತಾಲೂಕಿನ ಕಲ್ಮನೆ, ಎಸ್ ಎಸ್ ಬೋಗ್. ಸೊರಬ ತಾಲೂಕಿನ – ಬಿಳವಾಣಿ, ತಲಗಡ್ಡೆ. ಹೊಸನಗರ ತಾಲೂಕಿನ- ಯಡೂರು. ಶಿಕಾರಿಪುರ ತಾಲೂಕಿನ- ಅರಷಿಣಗೆರೆ , ಚಿಕ್ಕಜಂಬೂರು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಅದಾಲತ್ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

Leave a Reply

Your email address will not be published. Required fields are marked *

*