Breaking News

ಶಿವಮೊಗ್ಗ ಗ್ರಾಮಾಂತರ ಭಾಗದ ಜನ ಅಪೇಕ್ಷಿತ ಅಭ್ಯರ್ಥಿ ಧೀರರಾಜ್ ಹೊನ್ನವಿಲೆ.

Cnewstv / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ಗ್ರಾಮಾಂತರ ಭಾಗದ ಜನ ಅಪೇಕ್ಷಿತ ಅಭ್ಯರ್ಥಿ ಧೀರರಾಜ್ ಹೊನ್ನವಿಲೆ.

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಧೀರಾಜ್ ಹೊನ್ನವಿಲೆಯವರು ಇದೀಗ ಶಿವಮೊಗ್ಗ ಗ್ರಾಮಾಂತರ ಭಾಗದ ಜನರ ಅಪೇಕ್ಷಿತ ಅಭ್ಯರ್ಥಿಯಾಗಿದ್ದಾರೆ.

ಜನಸೇವೆ, ಸ್ಪಂದನೆ, ಅಭಿವೃದ್ಧಿ ಕಾರ್ಯದಲ್ಲಿ ಸದಾ ಮುಂದಿರುವ ಧೀರಾಜ್ ಹೊನ್ನವಿಲೆಯವರು ಈ ಬಾರಿ ಗ್ರಾಮಾಂತರ ಭಾಗದ ಅಭ್ಯರ್ಥಿಯಾಗಬೇಕು ಎಂದು ಜನರು ಅಪೇಕ್ಷಿಸುತ್ತಿದ್ದಾರೆ. ಈಗಾಗಲೇ ವಾರ್ಡ್ ನಂಬರ್ 3 ರ (ರಾಗಿಗುಡ್ಡ) ಮಹಾನಗರ ಪಾಲಿಕೆಯ ಸದಸ್ಯರಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮಾನಸದಲ್ಲಿ ಬೆರೆತಿದ್ದಾರೆ.

ಬಿಜೆಪಿ ಪಕ್ಷದೊಂದಿಗೆ ಧೀರಾಜ್ ಹೊನ್ನಾವಿಲೆಯವರು ಸುಮಾರು 20 ವರ್ಷಕ್ಕೂ ಹೆಚ್ಚಿನ ನೆಂಟನ್ನು ಹೊಂದಿದ್ದಾರೆ. ಗ್ರಾಮಾಂತರ ಭಾಗದ ಪ್ರಭಾರಿಯಾಗಿ, ಗ್ರಾಮಾಂತರ ಭಾಗದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿದ್ದಾರೆ.

ಮಹಾನಗರ ಪಾಲಿಕೆಯ ಸದಸ್ಯರಾಗಿ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸ್ವಚ್ಛತೆ, ಪೌರಕಾರ್ಮಿಕರ ಆರೋಗ್ಯ, ಸೇರಿದಂತೆ ಜನರ ಹಿತದೃಷ್ಟಿಯಿಂದ ತೆಗೆದುಕೊಂಡ ಅನೇಕ ಕ್ರಮಗಳನ್ನು ಜನರು ಮರೆಯಲು ಅಸಾಧ್ಯ‌‌

ಭೋವಿ ಸಮುದಾಯವನ್ನ ಪ್ರತಿನಿಧಿಸುವ ಧೀರಾಜ್ ಹೊನ್ನವಿಲೆಯವರು ಕೇವಲ ತಮ್ಮ ಸಮುದಾಯ ಮಾತ್ರವಲ್ಲದೆ ಶಿವಮೊಗ್ಗ ಗ್ರಾಮಾಂತರ ಭಾಗದ ಎಲ್ಲಾ ಸಮುದಾಯದವರ ಜೊತೆಯಲ್ಲೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು ತಮ್ಮದೇ ಆದ ಚಾಕು ಮೂಡಿಸಿದ್ದಾರೆ..

ಈ ಹಿಂದೆಯೇ ಗ್ರಾಮಾಂತರ ಭಾಗದ ಅಭ್ಯರ್ಥಿಯಾಗುವಂತೆ ಪಕ್ಷದ ಕಾರ್ಯಕರ್ತರಿಂದ ಹಾಗೂ ಗ್ರಾಮಾಂತರ ಭಾಗದ ಜನರು ಒತ್ತಾಯಿಸಿದರು ಆದರೆ ಕಾರಣಾಂತರಗಳಿಂದ ಟಿಕೆಟ್ ಕೈತಪ್ಪಿತ್ತು. ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಧೀರಾಜ್ ಹೊನ್ನವಿಲೆಯವರಿಗೆ ಅವಕಾಶ ನೀಡಬೇಕು ಎಂದು ಕೆಲ ಕಾರ್ಯಕರ್ತರುಗಳು ಪಕ್ಷದ ಹಿರಿಯ ನಾಯಕರಿಗೆ ಮನವೇ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಧೀರಾಜ್ ಹೊನ್ನವಿಲೆಯವರ ಹೆಸರು ಮಿಂಚುನಂತೆ ಸಂಚರಿಸುತ್ತಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*