Breaking News

ಭಾವಸರ್ ವಿಷನ್ ಇಂಡಿಯಾ ವತಿಯಿಂದ ಉಚಿತ ವೆರಿಕೋಸ್ ತಪಾಸಣಾ ಶಿಬಿರ.

Cnewstv / 01.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಭಾವಸರ್ ವಿಷನ್ ಇಂಡಿಯಾ ವತಿಯಿಂದ ಉಚಿತ ವೆರಿಕೋಸ್ ತಪಾಸಣಾ ಶಿಬಿರ.

ಶಿವಮೊಗ್ಗ : ಮಾರ್ಚ್ 5ರಂದು ವೆರಿಕೋಸ್ ವಿಷನ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಈ ತಪಾಸಣಾ ಶಿಬಿರವನ್ನು ಶೃಂಗೇರಿಯ ಹೆಸರಾಂತ ಆಯುರ್ವೇದಿಕ್ ವೈದ್ಯರಾದ ಡಾ. ಎಂ.ವಿ. ಉರಾಳ್ ರವರು ನಡೆಸಿಕೊಡಲಿದ್ದಾರೆ.

ವೆರಿಕೋಸ್ ವೇನ್ಸ್ ರೋಗಕ್ಕೆ ಹಲವಾರು ಜನರು ತುತ್ತಾಗುತ್ತಿದ್ದು ನಿರಂತರವಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡುವ ಜನರಿಗೆ ಈ ಕಾಯಿಲೆ ಪಿಡುಗಾಗಿ ಕಾಡುತ್ತಿದೆ. ತಜ್ಞಆಯುರ್ವೇದ ವೈದ್ಯರಾದ ಡಾ.ಎಂ.ವಿ. ಉರಾಳ್ ಸ್ವತಃ ಆವಿಷ್ಕರಿಸಿದ ಚಿಕಿತ್ಸಾ ಕ್ರಮದ ಮೂಲಕ ವೆರಿಕೋಸ್ ವೇನ್ಸ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತಿದ್ದಾರೆ. ಕೊನೆಯ ಹಂತದ ವೀನ್ಸ್ ಗುಣಪಡಿಸುವ ತಜ್ಞವೈದ್ಯರಾಗಿ ಇವರು ಸಾವಿರಾರು ರೋಗಿಗಳನ್ನು ಈ ಸಮಸ್ಯೆಯಿಂದ ಪಾರು ಮಾಡಿದ್ದಾರೆ. ಡಾ. ಎಂ.ವಿ. ಉರಾಳ್ ರವರು 15 ವರ್ಷಗಳ ಸತತ ಸಂಶೋಧನೆ ಮೂಲಕ ವೆರಿಕೋಸ್ ವೇನ್ಸ್ ಮತ್ತು ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಕಂಡುಹಿಡಿದಿದ್ದಾರೆ.

ಭಾನುವಾರರಂದು ಬೆಳಿಗ್ಗೆ 9-00 ಗಂಟೆಗೆ ನಗರದ ವಿನಾಯಕ
100 ಅಡಿರಸ್ತೆಯಲ್ಲಿರುವ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ತಪಾಸಣಾ ಶಿಬಿರ ಪ್ರಾರಂಭವಾಗಲಿದೆ. ಡಾ. ಎಂ.ವಿ. ಉರಾಳ್‌ರವರು ವೆರಿಕೋಸ್ ವೇನ್ಸ್‌ನ ಯಾವುದೇ ಹಂತದ
ಸಮಸ್ಯೆಗೂ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಯ ಸಲಹೆ ನೀಡಲಿದ್ದಾರೆ.

ಈ ಸಮಸ್ಯೆಯಿಂದ ಬಳಲುತ್ತಿರುವ ನಗರದ ನಾಗರೀಕರು ಈ ಕೆಳಕಂಡ ಮೊಬೈಲ್‌ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

9449329122, 9481466666,9164464480

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*