Breaking News

ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಅಗಮಿಸುವವರು, ಈ ವಸ್ತುಗಳನ್ನು ತರುವಂತಿಲ್ಲ

Cnewstv / 24.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಅಗಮಿಸುವವರು, ಈ ವಸ್ತುಗಳನ್ನು ತರುವಂತಿಲ್ಲ

ಶಿವಮೊಗ್ಗ : ಫೆ. 27 ರ ಸೋಮವಾರ ಶಿವಮೊಗ್ಗ ಜಿಲ್ಲೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿದ್ದು, ಈ ಕಾರ್ಯಕ್ರದಲ್ಲಿ ಭಾಗವಹಿಸುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ತರಲು ಅವಕಾಶವಿದ್ದು, ಇವುಗಳನ್ನು ಹೊರತು ಪಡಿಸಿ ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ/ಶರ್ಟ್/ಕರವಸ್ತ್ರ ಗಳನ್ನು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ.

ಇದನ್ನು ಒದಿ : https://cnewstv.in/?p=12199

ಕಾರ್ಯಕ್ರಮದ ದಿನದಂದು ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣದ ಹಿನ್ನೆಲೆಯಲ್ಲಿ ಬದಲೀ ಮಾರ್ಗದ ವ್ಯವಸ್ಥೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮತ್ತು ವಾಹನಗಳನ್ನು ಹೊರತು ಪಡಿಸಿ, ಕೆಎಸ್ಆರ್.ಟಿಸಿ /ಖಾಸಗಿ ಬಸ್ ಗಳು ಮತ್ತು ಇತರೆ ಯಾವುದೇ ವಾಹಾನಗಳಲ್ಲಿ ಪ್ರಯಾಣ ಬೆಳಸುವ ಇತರೆ ಪ್ರಯಾಣಿಕರುಗಳು ಕಾರ್ಯಕ್ರಮ ಸ್ಥಳವಾದ ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯನ್ನು ಹೊರತು ಪಡಿಸಿ, ಬದಲಿ ಮಾರ್ಗದಲ್ಲಿಯೇ ಪ್ರಯಾಣಿಸುವುದು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*