Breaking News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎರಡನೇ ಪ್ರಾಯೋಗಿಕ ವಿಮಾನ..

Cnewstv / 23.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎರಡನೇ ಪ್ರಾಯೋಗಿಕ ವಿಮಾನ..

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಈಗಾಗಲೇ ಒಂದನೇ ಪ್ರಾಯೋಗಿಕ ವಿಮಾನ ಯಶಸ್ವಿಯಾಗಿ ಆಗಮಿಸಿತ್ತು.‌ ಇಂದು ಮಧ್ಯಾಹ್ನ ಇಂಡಿಯನ್ ಏರ್ ಫೋರ್ಸ್ ನ ಎರಡನೇ ಪ್ರಾಯೋಗಿಕ ವಿಮಾನ ಯಶಸ್ವಿಯಾಗಿ ಆಗಮಿಸಿದೆ. ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಏರ್ಪೋರ್ಟ್ ನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

 

ಎರಡನೇ ಪ್ರಯೋಗಿಕ ವಿಮಾನದಲ್ಲಿ ಪ್ರಧಾನಿ ಅವರ ಕಾರು, ಭದ್ರತಾ ವಾಹನಗಳು ಸೇರಿದಂತೆ ಎಸ್ ಪಿಜಿ ಭದ್ರತಾ ಸಿಬ್ಬಂದಿಗಳು ನಗರಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಅವರ ಭದ್ರತೆಯ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*