ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಅಗಮಿಸಿವ ಸಾರ್ವಜನಿಕರ ಗಮನಕ್ಕೆ…

Cnewstv / 21.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಅಗಮಿಸಿವ ಸಾರ್ವಜನಿಕರ ಗಮನಕ್ಕೆ…

ಶಿವಮೊಗ್ಗ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣ ಉದ್ಘಾಟನೆಗೆ ಫೆ27ರ ಬೆಳಿಗೆ 11ಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವರು ಬೆಳಿಗ್ಗೆ 11ಕ್ಕೆ ಬಂದು ಮಧ್ಯಾಹ್ನ 1 ಗಂಟೆಗೆ ವಾಪಾಸು ಹೋಗುತ್ತಾರೆ. ಒಂದೇ ಜಾಗದಲ್ಲಿ ಎಲ್ಲಾ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ಇದನ್ನು ಒದಿ : https://cnewstv.in/?p=12159

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ಸುಮಾರು ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮೂರು ಸಾವಿರ ಬಸ್‌ಗಳನ್ನು ವಿವಿಧ ಕಡೆಯಿಂದ ಸಾರ್ವಜನಿಕರನ್ನು ಕರೆತರಲಿದೆ. ಇದರ ಜೊತೆಗೆ ವೈಯಕ್ತಿಕ ವಾಹನದಲ್ಲೂ ಬರುವವರಿದ್ದಾರೆ. ಎಲ್ಲೂ ಗೊಂದಲ ಆಗದ ಹಾಗೆ ಜನದಟ್ಟಣೆಯಾಗದಂತೆ ವ್ಯವಸ್ಥೆಯಾಗಲಿದೆ. ಸಾರ್ವಜನಿಕರಿಗೆ ಉಪಾಹಾರ, ನೀರು, ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಜಾಗ ಸುಮಾರು ದೂರ ಇರುತ್ತದೆ. ಸಾರ್ವಜನಿಕರು 15 ನಿಮಿಷಗಳ ಕಾಲವಾದರೂ ನಡೆಯಬೇಕಾಗಬಹುದು ಎಂದರು.

ಸಾರ್ವಜನಿಕರಿಗೆ ಒಂದು ವಿಶೇಷ ಸೂಚನೆಯೆಂದರೆ, ಬೆಳಿಗ್ಗೆ 10 ಗಂಟೆಯ ಒಳಗೆ ವಿಮಾನ ನಿಲ್ದಾಣದ ಗೇಟ್ ಬಳಿ ಇರಲೇಬೇಕು. ಆ ನಂತರ ಬರುವವರಿಗೆ ಗೇಟ್ ಹಾಕಿರುತ್ತಿದೆ. ಆದ್ದರಿಂದ ಕಾರ್ಯಕ್ರಮಕ್ಕೆ ಬರುವವರು 10 ಗಂಟೆಗೆ ಮುಂಚಿತವಾಗಿಯೇ ಸೇರಬೇಕು.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*