Breaking News

ಕಿವಿ ಮೇಲೆ ಹೂ, ರಾಜ್ಯ ಸರ್ಕಾರ ಬಜೆಟ್, ಬೋಗಸ್ ಬಜೆಟ್ – ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್.

Cnewstv / 20.02.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಿವಿ ಮೇಲೆ ಹೂ, ರಾಜ್ಯ ಸರ್ಕಾರ ಬಜೆಟ್, ಬೋಗಸ್ ಬಜೆಟ್ – ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್.

ಶಿವಮೊಗ್ಗ: ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಸರ್ಕಾರ ಸಾಮಾನ್ಯ ಜನರ ಕಿವಿಗೆ ಹೂವು ಇಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಕಿವಿಗೆ ಹೂ ಇಟ್ಟುಕೊಂಡೇ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು.

ಈ ಬಾರಿಯ ಬಜೆಟ್ ಬೋಗಸ್ ಬಜೆಟ್ ಆಗಿದೆ. ದುರ್ಬಲ ಮತ್ತು ಸುಳ್ಳಿನ ಬಜೆಟ್. ಬಜೆಟ್‌ನಲ್ಲಿ ಯಾವ ತೂಕವೂ ಇಲ್ಲ. ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ ಮತ್ತು ಅನುಷ್ಠಾನಕ್ಕೆ ಜಾರಿಗೆ ತರದ ಅಂಶಗಳನ್ನೇ ಈ ಬಜೆಟ್‌ನಲ್ಲೂ ಮುಂದುವರಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಬಜೆಟ್ ಮೂಡಿಬಂದಿದ್ದು, ಮತದಾರನ ಕಿವಿಗೆ ಹೂ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಕಳೆದ ಬಾರಿ ಸುಮಾರು 600 ಭರವಸೆಗಳನ್ನು ರಾಜ್ಯಸರ್ಕಾರ ನೀಡಿತ್ತು. ಅದರಲ್ಲಿ 50 ಮಾತ್ರ ಜಾರಿಗೆ ಬಂದಿದ್ದು,ಇನ್ನೂ 550 ಭರವಸೆಗಳು ಹಾಗೆಯೇ ಉಳಿದುಕೊಂಡಿವೆ. ರೈತರಿಗೆ ಈ ಬಜೆಟ್ನಿಂದ ಯಾವ ಲಾಭವೂ ಇಲ್ಲ. ಶಿವಮೊಗ್ಗ ಜಿಲ್ಲೆಗೆ ಯಾವ ಕೊಡುಗೆಯೂ ಇಲ್ಲ. ಭದ್ರಾವತಿಕಾರ್ಖಾನೆಗಳ ಪುನಶ್ಚೇತನದ ಭರವಸೆಯೂ ಇಲ್ಲ. ಮಠಗಳಿಗೆ ಆದ್ಯತೆ ನೀಡುವ ಮೂಲಕ ವೊಟ್ ಬ್ಯಾಂಕ್ ರಾಜಕಾರಣ ನಡೆದಿದೆ. ಎಲ್ಲಾ ವರ್ಗಗಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂದರು.

ಇದನ್ನು ಒದಿ : https://cnewstv.in/?p=12146

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇಕ್ಕೇರಿ ರಮೇಶ್, ಚಂದ್ರಶೇಖರ್, ಚೇತನ್, ಚಂದನ್, ಕೃಷ್ಣಪ್ಪ, ಖಲೀಂ ಪಾಷಾ, ಎನ್.ಡಿ. ಪ್ರವೀಣ್, ಗಂಗಾಧರ ಎಂ.ಎನ್, ನೇತಾಜಿ ಸೇರಿದಂತೆ ಹಲವರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

Leave a Reply

Your email address will not be published. Required fields are marked *

*